ಪಕ್ಷಿ ಪ್ರಪಂಚದ ವಿಸ್ಮಯ ಎಂದರೆ ಅದು ಹಾರ್ನ್‌ಬಿಲ್. ಕನ್ನಡದಲ್ಲಿ ಮಂಗಟ್ಟೆ ಎನ್ನಲಾಗುತ್ತೆ. ಇದು ಬದುಕಿರುವವರೆಗೂ ಒಂದೇ ಸಂಗಾತಿಯೊಂದಿಗೆ ಜೀವಿಸುತ್ತದೆ. ಸಂಸಾರ ಹೂಡುತ್ತದೆ. ಮೊಟ್ಟೆ ಇಡುವ ಹೆಣ್ಣು ಮಂಗಟ್ಟೆ ತನ್ನ ಮರಿಗಳು ಹೊರಬಂದು ಆಹಾರ ಸೇವನೆಗೆ ಸಿದ್ಧವಾಗುವವರೆಗೂ ಗೂಡು ಬಿಟ್ಟು ಆಚೆ ಬರೋದಿಲ್ಲ. ಇನ್ನು ತನ್ನ ಸಂಗಾತಿ ಹಾಗೂ ಮಕ್ಕಳಿಗಾಗಿ ಗಂಡು ಮಂಗಟ್ಟೆ ಆಹಾರವನ್ನು ತನ್ನ ಗಂಟಲಲ್ಲಿ ಶೇಖರಿಸಿ ತಂದು ಮಕ್ಕಳಿಗೆ ತಿನಿಸುತ್ತದೆ. ಹೀಗೆ ತಿನಿಸುವಾಗ ತನ್ನ ಸುತ್ತ ಯಾರೂ ಇಲ್ಲದ್ದನ್ನು ಖಚಿತಪಡಿಸಿಕೊಳ್ಳುತ್ತದೆ. ತನ್ನ ಮಕ್ಕಳು ರೆಕ್ಕೆ ಬಲಿತು ಸ್ವತಂತ್ರವಾಗಿ ಹಾರುವವರೆಗೂ ಜವಾಬ್ದಾರಿಯಿಂದ ನೋಡಿಕೊಳ್ಳುತ್ತದೆ.
ಇದೇ ರೀತಿ ಅಪ್ಪನಾದ ಮಂಗಟ್ಟೆ ತನ್ನ ಮಕ್ಕಳಿಗೆ ಆಹಾರ ತಿನಿಸುತ್ತಿರುವ ಅತ್ಯಪರೂಪ ಎನ್ನಬೇಕಾದ ವಿಡಿಯೋ ಈಗ ವೈರಲ್ ಆಗಿದೆ. ಹಾಗೂ ಪಕ್ಷಿಪ್ರೇಮಿಗಳ ಹೃದಯ ಗೆದ್ದಿದೆ. ಅರಣ್ಯ ಇಲಾಖೆ ಇದ್ಯೋಗಿ ಸಂಜಯ್ ಹೊಯ್ಸಳ ಅವರು ಈ ಅಪರೂಪದ ದೃಶ್ಯವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
PublicNext
20/06/2022 02:37 pm