ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವಿಡಿಯೋಗಳು ವೈರಲ್ ಆಗುತ್ತವೆ. ಕೆಲವರು ಬಾತ್ ರೂಂನಲ್ಲಿ ಹಾಡು ಹೇಳುವ ಮೂಲಕವೇ ಫೇಮಸ್ ಆಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳನ್ನು ಸರಿಯಾಗಿ ಬಳಸಿಕೊಂಡ ಅನೇಕ ಪ್ರತಿಭೆಗಳು ಮುಖ್ಯ ವೇದಿಕೆ ಕಂಡಿವೆ.
ಸದ್ಯ ಥೆಶಾಲಿನಿ ದುಬೆ ಎಂಬ ಹುಡುಗಿ ಅಡುಗೆ ಮನೆಯಲ್ಲಿ ಪಸೂರಿ ಹಾಡಿರುವ ವಿಡಿಯೋವೊಂದು ವೈರಲ್ ಆಗಿದೆ. ಈ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.ಸಾಮಾಜಿಕ ಜಾಲತಾಣದಲ್ಲಿ ಕೆಲವೊಂದು ಹಾಡುಗಳು ಸಖತ್ ವೈರಲ್ ಆಗುತ್ತವೆ. ಅದು ಗಾಯಕರು ಹಾಡಿರುವ ಹಾಡಿಗಿಂತಲ್ಲೂ ಕೆಲವೊಂದು ಎಲೆಮರೆಯ ಪ್ರತಿಭೆಗಳು ಹಾಡಿದಾಗ ಇನ್ನೂ ಹೆಚ್ಚು ಪ್ರಾಮುಖ್ಯತೆಯನ್ನು ಪಡೆದುಕೊಳ್ಲುತ್ತದೆ.
ಸದ್ಯ ಪಾಕಿಸ್ತಾನದ ಕಲಾವಿದರಾದ ಅಲಿ ಸೇಥಿ ಮತ್ತು ಶೇ ಗಿಲ್ ಹಾಡಿರುವ 'ಪಸೂರಿ' ಹಾಡು ಈ ವರ್ಷದ ಒಂದು ಅದ್ಭುತ ಹಾಡು ಎಂಬ ಪ್ರಶಂಸೆಯನ್ನು ಪಡೆದಿದೆ. ಇದೊಂದು ರೀತಿಯಲ್ಲಿ ಜಗತ್ತಿನಾದ್ಯಂತ ಅಲೆಗಳನ್ನೇ ಎಬ್ಬಿಸಿದೆ.
PublicNext
13/06/2022 07:53 pm