ಅಜ್ಜ ಅಜ್ಜಿಯರೊಂದಿಗೆ ಇರುವ ಕ್ಷಣವೇ ಸುಂದರ. ಅವರ ಆಶೀರ್ವಾದ,ಪ್ರೀತಿಗೆ ಸರಿಸಾಟಿ ಮತ್ತೊಂದಿಲ್ಲ. ಅಜ್ಜ ಅಜ್ಜಿ ತಮ್ಮ ಮೊಮ್ಮಕ್ಕಳನ್ನು ಅತ್ಯಂತ ಪ್ರೀತಿಯಿಂದ ನೋಡಿಕೊಳ್ಳುತ್ತಾರೆ. ಇದು ಕೂಡಾ ಅಂತಹದ್ದೇ ಪ್ರೀತಿಯ ದೃಶ್ಯ.
ಮೊಮ್ಮಕ್ಕಳಿಗೆ ಯಾವುದೇ ತೊಂದರೆಯಾಗದಿರಲಿ, ಯಾರ ಕಣ್ಣ ದೃಷ್ಟಿಯೂ ಬೀಳದಿರಲಿ ಎಂಬ ಹಾರೈಕೆ ಅಜ್ಜ ಅಜ್ಜಿಯರದ್ದು. ಕೆಲವು ಸಂದರ್ಭದಲ್ಲಿ ಅಜ್ಜಿ ಮಗುವಿನ ಕಣ್ಣ ದೃಷ್ಟಿಯನ್ನು ತೆಗೆಯುವುದನ್ನು ನೋಡುವುದೇ ಚಂದ. ಇಂದಿಗೂ ನಾವು ಇದನ್ನು ನೋಡಬಹುದು.
ಐಎಎಸ್ ಅಧಿಕಾರಿ ಅವನೀಶ್ ಶರಣ್ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡ ಈ ವಿಡಿಯೋದಲ್ಲಿ ಅವನೀಶ್ ಅವರು ಅಜ್ಜಿ ತನ್ನ ಮೊಮ್ಮಗುವಿನ ಕಣ್ಣ ದೃಷ್ಟಿ ತೆಗೆಯುವ ದೃಶ್ಯವನ್ನು ಶೇರ್ ಮಾಡಿದ್ದಾರೆ.
ಈ ದೃಶ್ಯವನ್ನು ನೋಡುವಾಗಲೇ ಖುಷಿಯಾಗುತ್ತದೆ. ಜತೆಗೆ, ಬಹುತೇಕರಿಗೆ ಈ ದೃಶ್ಯ ಅವರ ಬಾಲ್ಯದ ದಿನಗಳನ್ನೂ ನೆನಪಿಗೆ ತಂದಿರಬಹುದು.
PublicNext
12/06/2022 03:49 pm