ನಿರ್ಮಲ ಹೃದಯದ, ದೇವರ ಮನಸ್ಸಿನ ಮಕ್ಕಳು ಪಕ್ಕದಲ್ಲಿದ್ದರೆ ಖುಷಿಯೇ ಬೇರೆ. ಇನ್ನು ಮಕ್ಕಳು ಏನು ಮಾಡಿದರೂ ಅದನ್ನು ನೋಡುವುದೇ ಚೆಂದ. ಸದ್ಯ ಅಂತಹದ್ದೇ ಆನಂದದಾಯಕ ದೃಶ್ಯವೊಂದು ವೈರಲ್ ಆಗುತ್ತಿದೆ.
ಮುದ್ದು ಮಕ್ಕಳಿಗೆ ಮನೆಯ ಮುದ್ದಿನ ಶ್ವಾನಗಳೆಂದರೆ ಬಲು ಪ್ರೀತಿ. ಮಕ್ಕಳು ಶ್ವಾನಗಳೊಂದಿಗೆ ಆಡುತ್ತಾ ಖುಷಿಪಡಲು ಬಯಸುತ್ತಾರೆ. ಮನೆಯ ಶ್ವಾನಗಳು ಪುಟಾಣಿಗಳ ಬೆಸ್ಟ್ ಫ್ರೆಂಡ್ ಕೂಡಾ ಹೌದು.
ಸದ್ಯ ಮುದ್ದು ಪುಟಾಣಿ ಮತ್ತು ಶ್ವಾನ ಜತೆಯಾಗಿ `ಹಾಡು'ವ ದೃಶ್ಯ ಇಲ್ಲಿದೆ.
barked ಎಂಬ ಇನ್ ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು ಸದ್ಯ ಈ ವಿಡಿಯೋ ಸಖತ್ ವೈರಲ್ ಆಗುತ್ತಿದೆ.
PublicNext
09/06/2022 04:10 pm