ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೃಗಾಲಯದಲ್ಲಿ ಜೋಕೆ : ಯುವಕನನ್ನು ಎಳೆದು ಹಿಡಿದುಕೊಂಡ ಒರಾಂಗುಟಾನ್!

ಪ್ರಾಣಿ ಪ್ರಾಣಿಗಳೇ ಅವುಗಳಿಂದ ಅಂತರ ಕಾಯ್ದುಕೊಳ್ಳುವುದು ಅತೀ ಮುಖ್ಯ. ಕೆಲವು ಸಂದರ್ಭಗಳಲ್ಲಿ ಕೆಲವರು ನಡೆದುಕೊಳ್ಳುವ ರೀತಿ ಪ್ರಾಣಿಗಳಿಗೂ ಕೋಪ ತರಿಸುವಂತಿರುತ್ತದೆ.

ಇದಕ್ಕೆ ಈ ವಿಡಿಯೋ ಬೆಸ್ಟ್ ಸಾಕ್ಷಿ. ಯಾವತ್ತೂ ಪ್ರಾಣಿಗಳಿಗೆ ಕಿರಿಕಿರಿಯಾಗುವಂತೆ ನಾವು ವರ್ತಿಸಲೇಬಾರದು. ಒಂದೊಮ್ಮೆ ಪ್ರಾಣಿಗಳಿಗೆ ಕಿರಿಕಿರಿಯಾದರೆ, ಅವುಗಳು ರೊಚ್ಚಿಗೆದ್ದರೆ ಅದರ ಪರಿಣಾಮ ಘೋರ.

ಇಷ್ಟು ದಿನ ಸೋಶಿಯಲ್ ಮೀಡಿಯಾದಲ್ಲಿ ಒರಾಂಗುಟನ್ ಗಳ ಬುದ್ಧಿವಂತಿಕೆ, ಹೃದಯವಂತಿಕೆ, ತುಂಟಾಟ, ಯೋಚನಾ ಶಕ್ತಿಗೆ ಸಾಕ್ಷಿಯಾದ ಸಾಕಷ್ಟು ವಿಡಿಯೋಗಳನ್ನು ನೋಡಿದ್ದೇವೆ. ಆದರೆ, ಈ ದೃಶ್ಯದಲ್ಲಿ ಸಿಟ್ಟಿಗೆದ್ದ ಒರಾಂಗುಟನ್ ವ್ಯಕ್ತಿಯೊಬ್ಬನನ್ನು ಎಳೆದು ಹಿಡಿದ ದೃಶ್ಯ ಎದೆ ಧಗ್ ಎನ್ನುವಂತಿದೆ.

ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಮೃಗಾಲಯವೊಂದರಲ್ಲಿ ಪಂಜರದಲ್ಲಿರುವ ಒರಾಂಗುಟನ್ ಯುವಕನೊಬ್ಬನ ಬಟ್ಟೆ ಹಿಡಿದು ಎಳೆಯುವ ದೃಶ್ಯವನ್ನು ನೋಡಬಹುದಾಗಿದೆ. ಈ ವೇಳೆ ಒರಾಂಗುಟ್ ಕೈಯಿಂದ ತಪ್ಪಿಸಿಕೊಳ್ಳಲು ಸಾಕಷ್ಟು ಪ್ರಯತ್ನಿಸಿದರೂ ಅದು ಸಾಧ್ಯವಾಗುವುದೇ ಇಲ್ಲ.

ಈ ವೇಳೆ ಈತನ ಸ್ನೇಹಿತ ಬಿಡಿಸಲು ಯತ್ನಿಸುತ್ತಾನೆ. ಆದರೆ, ಆತನ ಪ್ರಯತ್ನವೂ ಯಶಸ್ವಿಯಾಗಿಲ್ಲ. ಅಷ್ಟೇ ಅಲ್ಲದೆ, ಈ ಯುವಕನ್ನು ಒರಾಂಗುಟನ್ ಎತ್ತಿ ಬೀಳಿಸಲು ಯತ್ನಿಸುವುದನ್ನು ಕಾಣಬಹುದಾಗಿದೆ.

Edited By : Shivu K
PublicNext

PublicNext

08/06/2022 03:42 pm

Cinque Terre

41.76 K

Cinque Terre

1

ಸಂಬಂಧಿತ ಸುದ್ದಿ