ಮದುವೆ ಪ್ರತಿಯೊಬ್ಬರ ಬದುಕಿನಲ್ಲಿ ಪ್ರಮುಖ ಘಟ್ಟ. ಅದು ಪ್ರತಿಯೊಬ್ಬರ ಕನಸು ಹಾಗಾಗಿ ಅವರವರ ಮದುವೆಯನ್ನು ಸ್ಮರಣೀಯವನ್ನಾಗಿಸಲು ಪ್ರಯತ್ನಿಸುತ್ತಾರೆ.
ಅದೇ ರೀತಿ ಇಲ್ಲೊಂದು ಜೋಡಿ ಬೆಂಕಿಯೊಂದಿಗೆ ಸಾಹಸವನ್ನೇ ಮಾಡಿದೆ. ಹೌದು ನವದಂಪತಿ ಬೆಂಕಿಯೊಂದಿಗಿನ ಈ ಸರಸ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ.
g.a_thegreatadventure ಎಂಬ ಇನ್ ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೋವನ್ನು ಅಪ್ಲೋಡ್ ಮಾಡಲಾಗಿರುವ ವಿಡಿಯೋದಲ್ಲಿ ಜೋಡಿ ಬೆಂಕಿಯೊಂದಿಗಿನ ಸರಸದ ಸಾಹಸ ಕಾಣಬಹುದು.
ವೃತ್ತಿಪರ ಸ್ಟಂಟ್ ಮ್ಯಾನ್ ಗೇಬ್ ಜೆಸ್ಸಾಪ್ ಮತ್ತು ಅವರ ಪತ್ನಿ ಅಂಬಿರ್ ಬಾಂಬಿರ್ ಮಿಶೆಲ್ ಅವರ ವಿವಾಹದ ಖುಷಿಯ ಕ್ಷಣವಿದು. ಥ್ರಿಲ್ ಮತ್ತು ಸಸ್ಪೆನ್ಸ್ ನ ಪರಿಕಲ್ಪನೆಯೊಂದಿಗೆ ಈ ಜೋಡಿ ಎಂಟ್ರಿ ಕೊಟ್ಟಿದೆ.
ದಾಂಪತ್ಯದ ಬದ್ಧತೆಯನ್ನು ಪರಸ್ಪರ ದಾಖಲಿಸಿಕೊಂಡ ಬಳಿಕ ಕೈಕೈ ಹಿಡಿದು ಹೆಜ್ಜೆ ಇಟ್ಟ ಈ ಜೋಡಿ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದರು. ಈ ಸ್ಟಂಟ್ನ ದೃಶ್ಯವನ್ನು ಕಂಡು ಅತಿಥಿಗಳು ಹೌಹಾರುವ ಜತೆಗೆ ಈ ಜೋಡಿಯನ್ನು ಹುರಿದುಂಬಿಸಿದ್ದರು.
PublicNext
16/05/2022 07:27 pm