ಉತ್ತರ ಪ್ರದೇಶ : ಇನ್ನೇನು ಕೆಲವು ನಿಮಿಷಗಳಲ್ಲಿ ಮದುವೆ ಮಗಿದು ಹೋಗುತ್ತಿತ್ತು ಈ ವೇಳೆ ವಧು ವರನಿಗೆ ಕಪಾಳಮೋಕ್ಷ ಮಾಡಿ ಮದುವೆ ಮಂಟಪದಿಂದ ಹೊರನಡೆದ ಘಟನೆ ಹಮೀರ್ ಪುರದಲ್ಲಿ ನಡೆದಿದೆ.
ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಧು ವರನಿಗೆ ಕಪಾಳಮೋಕ್ಷ ಮಾಡಲು ನಿಜವಾದ ಕಾರಣವನ್ನು ಕಂಡುಹಿಡಿಯಲಾಗದಿದ್ದರೂ, ವರನು ಮದುವೆಯ ಸ್ಥಳಕ್ಕೆ ಕುಡಿದು ಬಂದಿದ್ದಾನೆ ಎಂದು ವಧುವಿನ ಕುಟುಂಬದ ಹತ್ತಿರದ ಜನರು ಹೇಳಿದ್ದಾರೆ, ಇದು ಹುಡುಗಿಯನ್ನು ಕೆರಳಿಸಿದೆ. ಇತ್ತ ಯುವತಿ ಕೈಯಿಂದ ಹೊಡೆಸಿಕೊಂಡ ವರನನ್ನು ರವಿಕಾಂತ್ ಎಂದು ಗುರುತಿಸಲಾಗಿದೆ.
ಒಂದೇ ಬಾರಿ ಅಲ್ಲ ಎರಡೆರಡು ಬಾರಿ ಕಪಾಳಮೋಕ್ಷ ಮಾಡಿರುವುದು ವೈರಲ್ ಆಗಿರುವ ವಿಡಿಯೋದಲ್ಲಿದೆ. ಇನ್ನು ಸಿಟ್ಟಿನಿಂದ ಮಂಟಪದಿಂದ ಬಂದ ವಧುವನ್ನು ಸಮಾಧಾನ ಮಾಡಿ ಮದುವೆ ಮಾಡಲಾಗಿದೆ.
PublicNext
19/04/2022 06:33 pm