ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಟ್ರಾಫಿಕ್ ಪೊಲೀಸ್ ಮೇಲೆ ಗೂಳಿ ದಾಳಿ : ವಿಡಿಯೋ ವೈರಲ್

ಎಂದಿನಂತೆ ಸರ್ಕಲ್ ವೊಂದರಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಟ್ರಾಫಿಕ್ ಪೊಲೀಸ್ ಮೇಲೆ ಗೂಳಿವೊಂದು ಏಕಾಏಕಿ ದಾಳಿ ನಡೆಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವಿಡಿಯೋದಲ್ಲಿ ಟ್ರಾಫಿಕ್ ಪೊಲೀಸ್ ನನ್ನು ಗೂಳಿ ಎತ್ತಿ ಬಿಸಾಕಿರುವುದನ್ನು ಗಮನಿಸಬಹುದು. ದೆಹಲಿಯ ದಯಾಲ್ ಪುರದ ಶೇರ್ ಪುರ್ ಚೌಕ್ ನಲ್ಲಿ ಈ ಘಟನೆ ನಡೆದಿದ್ದು,ಘಟನೆಯ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಕೆಳಗೆ ಬಿದ್ದ ಪೊಲೀಸ್ ಪೇದೆಯನ್ನು ಅವರ ಸಹೋದ್ಯೋಗಿಗಳು ಆಸ್ಪತ್ರೆಗೆ ಕರೆದೊಯ್ದಿದ್ದಿದ್ದಾರೆ. ಏಟು ತಿಂದ ಪೊಲೀಸನನ್ನು ಜ್ಞಾನ್ ಸಿಂಗ್ ಎಂದು ಗುರುತಿಸಲಾಗಿದೆ. ಸದ್ಯ ಪೊಲೀಸ್ ಕಾನ್ಸ್ ಟೇಬಲ್ ಆರೋಗ್ಯವಾಗಿದ್ದಾರೆ.

ವಿಡಿಯೋ ವೈರಲ್ ಆಗ ಬಳಿಕ ದೆಹಲಿಯಲ್ಲಿ ಬಿಡಾಡಿ ದನಗಳ ಸಮಸ್ಯೆಗೆ ಪರಿಹಾರ ನೀಡಬೇಕು ಎಂದು ಹಲವರು ಒತ್ತಾಯಿಸಿದ್ದಾರೆ.

Edited By : Shivu K
PublicNext

PublicNext

07/04/2022 10:26 am

Cinque Terre

91.5 K

Cinque Terre

12

ಸಂಬಂಧಿತ ಸುದ್ದಿ