ಯಾರೂ ಆಹ್ವಾನಿಸದೆ ಮದುವೆ ಆರತಕ್ಷತೆಗೆ ಆಗಮಿಸಿದ ವಿಶೇಷ ಅತಿಥಿಗಳು ಎಲ್ಲರಿಗೂ ನಡುಕ ಹುಟ್ಟಿಸಿದ ಘಟನೆ ಛತ್ತೀಸ್ ಗಢದ ಕಂಕೇರ್ ಜಿಲ್ಲೆಯಲ್ಲಿ ನಡೆದಿದೆ.
ಯಾರಿವರು ಆಹ್ವಾನಿಸದ ಅತಿಥಿಗಳು ಅಂದ್ರೆ ಇವ್ರೆ ನೋಡಿ ಕರಡಿ ಕುಟುಂಬದವರು. ಹೌದು ಆರತಕ್ಷತೆಗೆಂದು ಸಜ್ಜಾಗಿದ್ದ ವೇದಿಕೆ ಸರ್ವಾಲಂಕಾರದಿಂದ ಕಂಗೊಳಿಸುತ್ತಿತ್ತು. ಇದೇ ವೇಳೆ ವೇದಿಕೆಗೆ ಎಂಟ್ರಿ ಕೊಟ್ಟ ಅತಿಥಿಗಳು ಆರತಕ್ಷತೆಯ ವ್ಯವಸ್ಥೆಯನ್ನು ಪರಿಶೀಲಿಸಿದ್ದಾರೆ.
ತಾಯಿ ಕರಡಿ ಮತ್ತು ಅವಳ ಎರಡು ಮರಿಗಳ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇನ್ನು ಈ ವಿಡಿಯೋ ಕಂಡವರೆಲ್ಲ ನಗುತ್ತಲೇ ಅಚ್ಚರಿಗೊಂಡಿದ್ದಾರೆ. ಭಾರತೀಯ ಅರಣ್ಯ ಸೇವೆಗಳ ಅಧಿಕಾರಿ ಪರ್ವೀನ್ ಕಸ್ವಾನ್ ಅವರು ಈ ವಿಡಿಯೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
PublicNext
19/02/2022 09:36 am