ಜೀವನದಲ್ಲಿ ಗೆಳೆತನಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ದೋಸ್ತರ ದಂಡು ಜೊತೆಗಿದ್ದರೆ ಸಾಕು ಯಾವುದು ಅಸಾಧ್ಯವಲ್ಲ.
ಸದ್ಯ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗಿದೆ. ಈ ವಿಡಿಯೋ ನೋಡಿದ ಪ್ರತಿಯೊಬ್ಬರ ಕಣ್ಣು ಒದ್ದೆಯಾಗುತ್ತವೆ ಹೃದಯ ಭಾರ ಎನಿಸತ್ತೆ.
ಅದು ಶಾಲೆಯೊಂದರ ಬಾಸ್ಕೆಟ್ ಬಾಲ್ ಪಂದ್ಯ. ಉತ್ಸಾಹದಿಂದ ಕ್ರಿಡಾಂಗಣಕ್ಕೆ ಬಂದ ತಂಡವೊಂದರ ಸದಸ್ಯರು ಮೊದಲು ಪ್ರೇಕ್ಷಕರ ಗ್ಯಾಲರಿಯಲ್ಲಿದ್ದ ಮಹಿಳೆಯನ್ನು ತಂಡದ ಎಲ್ಲಾ ಸದಸ್ಯರು ಒಬ್ಬೊಬ್ಬರಾಗಿಯೇ ಬಂದು ಆಲಿಂಗಿಸಿಕೊಂಡು ಆಶೀರ್ವಾದ ಪಡೆದಿದ್ದರು.
ಆ ಮಹಿಳೆ ಕೂಡಾ ಅಷ್ಟೇ ಪ್ರೀತಿಯಿಂದ ಆಟಗಾರರನ್ನು ಹರಸಿದ್ದರು.
ಇಷ್ಟಕ್ಕೂ ಈ ಮಹಿಳೆ ಯಾರು ಅಂದ್ರೆ ಇದೇ ತಂಡದಲ್ಲಿ ಆಡಬೇಕಿದ ಆಟಗಾರನೊಬ್ಬನ ತಾಯಿ. ವಿಧಿಯಾಟಕ್ಕೆ ಆ ತಾಯಿಯ ಮಗ ಕಾರು ಅಪಘಾತದಲ್ಲಿ ಸಾವನ್ನಪ್ಪಿದ್ದಾನೆ.
ಹೀಗಾಗಿ, ಅಗಲಿದ ಸ್ನೇಹಿತನ ನೆನಪಿನಲ್ಲಿ ಈ ಎಲ್ಲಾ ಆಟಗಾರರು ಆತನ ತಾಯಿಯನ್ನು ಆಲಿಂಗಿಸಿ ಪ್ರೀತಿ ತೋರಿಸಿದ್ದಾರೆ. ಆ ತಾಯಿ ಕೂಡಾ ತನ್ನ ಮಗನಂತೆ ಎಲ್ಲಾ ಆಟಗಾರರನ್ನೂ ಹರಸಿದ್ದಾರೆ.
ಸದ್ಯ ಆಟಗಾರರ ಪ್ರೀತಿ, ಹೃದಯವಂತಿಕೆಯನ್ನು ಎಲ್ಲರೂ ಮೆಚ್ಚಿದ್ದಾರೆ.
PublicNext
15/02/2022 10:33 am