ನಾವು ಎಂತವರು ಅನ್ನೋದನ್ನ ನಾವು ಮಾಡುವ ಕಾಯಕದಲ್ಲಿ ತೋರಿಸವೇಕು. ಹಾರ್ಡ್ ವರ್ಕ್ ಜೊತೆಗೆ ಕೆಲವೊಮ್ಮೆ ಸ್ಮಾರ್ಟ್ ವರ್ಕ್ ಕೂಡ ಮಾಡಬೇಕಾಗುತ್ತೆ. ಕಟ್ಟಡ ಕಾರ್ಮಿಕನೊಬ್ಬ ಹಗ್ಗಕ್ಕೆ ಜೋತು ಬಿದ್ದು ಸಿಮೆಂಟ್ ಚೀಲವನ್ನ ಮೇಲಿನ ಮಹಡಿಗೆ ಸುಂಯ್ ಟಪಕ್ ಅಂತ ಕಳಿಸಿದ್ದಾನೆ. ಈತ ಮಾಡಿದ ಈ ಐಡಿಯಾ ಕಂಡು ಜನ ಇದ್ದರೆ ಇರಬೇಕು ಇಂತಹ ಕೆಲಸಗಾರ ಅಂತ ಮೆಚ್ಚಿಕೊಂಡಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗುತ್ತಿದೆ. ಕೆಲಸ ಮಾಡಬೇಕೆಂಬ ಆಸಕ್ತಿ ಇದ್ದರೆ ಇಂತಹ ನೂರೆಂಟು ಸರಳ ಮಾರ್ಗಗಳು ತಂತಾನೇ ಹುಟ್ಟಿಕೊಳ್ಳುತ್ತವೆ ಅನ್ನೋದಕ್ಕೆ ಇದು ಬೆಸ್ಟ್ ಉದಾಹರಣೆ ಅಲ್ವೇ..?
PublicNext
07/02/2022 08:17 am