ಯುವಕರು ಬೈಕ್ ಸ್ಟಂಟ್ ಮಾಡಿ ತಮಗಷ್ಟೇ ಅಲ್ಲದೆ ಬೇರೆಯವರಿಗೂ ತೊಂದರೆ ಕೊಡುವುದನ್ನು ನಾವು ನೀವೆಲ್ಲಾ ನೋಡಿದ್ದೇವೆ. ಆದ್ರೆ ಇಲ್ಲೊಬ್ಬ ಮುದುಕನಿಗೆ ಇರುವ ಬೈಕ್ ಕ್ರೇಝ್ ಕಂಡ್ರೆ ನಿಮಗೂ ಅಚ್ಚರಿಯಾಗುತ್ತದೆ.
ಹೌದು ಈ ವೃದ್ಧ ಹೆಲ್ಮೆಟ್ ಹಾಕದೇ ಬೈಕ್ ಏರಿ ಸಾಹಸ ಪ್ರದರ್ಶಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ದೃಶ್ಯವನ್ನು ನೋಡುವಾಗ ಎಷ್ಟು ಅಚ್ಚರಿಯಾಗುತ್ತದೋ, ಅಷ್ಟೇ ಆಘಾತ ಕೂಡಾ ಆಗುತ್ತದೆ.
ಸುಮಾರು 60 ರ ಆಸುಪಾಸಿನಲ್ಲಿರುವ ವೃದ್ಧರೊಬ್ಬರು ಬೈಕ್ ಮೇಲೆ ಹ್ಯಾಂಡಲ್ ಬಿಟ್ಟು ಕುಳಿತಲ್ಲೇ ಜಿಗಿಯುವ ದೃಶ್ಯ ಕಾಣಬಹುದು.
ನೋಡುಗರಿಗೆ ಭಯಪಡಿಸುವ ಈ ದೃಶ್ಯದಲ್ಲಿ ಅಜ್ಜ ಮಾತ್ರ ಕೂಲ್ ಆಗಿ ತಮ್ಮ ಸಾಹಸ ಪ್ರದರ್ಶಿಸುತ್ತಾರೆ. ಬಹುತೇಕರು ಇದು ಅಪಾಯಕಾರಿ ಸಾಹಸ ಎಂದು ಅಭಿಪ್ರಾಯಪಟ್ಟಿದ್ದಾರೆ.
PublicNext
02/02/2022 07:42 pm