ಯಾವುದೇ ವಾಹನದ ಚಾಲಕನಾಗಿರಲಿ ಕೆಲವು ಸಂದರ್ಭಗಳಲ್ಲಿ ಅವರ ಸಮಯ ಪ್ರಜ್ಞೆ,ಜಾಗರೂಕತೆಯನ್ನು ನಿಜಕ್ಕೂ ಮೆಚ್ಚಲೇಬೇಕು.
ಸದ್ಯ ವೈರಲ್ ಆದ ವಿಡಿಯೋವೊಂದರಲ್ಲಿ ಹೊತ್ತಿ ಉರಿಯುತ್ತಿದ್ದ ಲಾರಿವೊಂದನ್ನು ಚಲಾಯಿಸಿದ ಚಾಲಕನ ಕಾರ್ಯ ಎಲ್ಲರೂ ಹುಬ್ಬೇರಿಸುವಂತೆ ಮಾಡಿದೆ.
ಕೇರಳದಲ್ಲಿ ಸೆರೆಯಾದ ದೃಶ್ಯವಿದು ಲಾರಿ ಒಂದರಲ್ಲಿ ಸಾಗಿಸುತ್ತಿದ್ದ ಒಣಹುಲ್ಲಿಗೆ ವಿದ್ಯುತ್ ತಂತಿ ತಗುಲಿ ಬೆಂಕಿ ಹೊತ್ತಿಕೊಂಡು ಲಾರಿ ಧಗಧಗನೆ ಉರಿಯಲಾರಂಭಿಸಿದೆ. ಈ ವೇಳೆ ಚಾಲಕ ವಾಹನ ನಿಲ್ಲಿಸಿ ಆತಂಕಗೊಂಡಾಗ ಅಲ್ಲಿಯ ಸ್ಥಳೀಯರೊಬ್ಬರು ಉರಿಯುವ ಲಾರಿ ಏರಿ ಮುಂದೆ ಚಲಾಯಿಸಿ ದೊಡ್ಡ ದುರಂತವೊಂದನ್ನು ತಪ್ಪಿಸಿದ್ದಾರೆ.
ಸದ್ಯ ಆ ವ್ಯಕ್ತಿಯ ಸಾಹಸ, ಧೈರ್ಯ ಮತ್ತು ಸಮಯಪ್ರಜ್ಞೆಯನ್ನು ಎಲ್ಲರೂ ಮುಕ್ತಕಂಠದಿಂದ ಶ್ಲಾಘಿಸುತ್ತಿದ್ದಾರೆ.
PublicNext
02/02/2022 12:49 pm