ಜಿಂಕೆಯೊಂದು ಅತಿ ಎತ್ತರಕ್ಕೆ ಜಿಗಿದು ಆಕಾಶದಲ್ಲಿ ಹಾರಾಡಿದ ರೀತಿಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಜಿಂಕೆಯ ಸಾಮರ್ಥ್ಯವನ್ನು ಕಂಡಾಗ ನಿಜಕ್ಕೂ ಅಚ್ಚರಿಯಾಗುತ್ತದೆ. ಒಂದು ಕ್ಷಣ ಉಸಿರು ಬಿಗಿಹಿಡಿದು ನೋಡುವಂತೆ ಮಾಡುತ್ತದೆ ಈ ಜಿಂಕೆಯ ಜಿಗಿತ.
ಅದ್ಭುತವಾಗಿ ಜಿಗಿದ ಜಿಂಕೆ ಬಳಿಕ ರಸ್ತೆಯ ಇನ್ನೊಂದು ಪಕ್ಕದ ಸುರಕ್ಷಿತ ಜಾಗದಲ್ಲಿ ಇಳಿದು ಕಾಡಿನಲ್ಲಿ ಮರೆಯಾಗುತ್ತದೆ. ಈ ಅದ್ಭುತ ದೃಶ್ಯವನ್ನು ಅಲ್ಲಿದ್ದ ಜನರು ಬಲು ಆಸಕ್ತಿಯಿಂದಲೇ ನೋಡಿ ಖುಷಿಪಟ್ಟಿದ್ದಾರೆ. ಸಹಜವಾಗಿಯೇ ಜಿಂಕೆಯ ಈ ಜಿಗಿತ ಎಲ್ಲರನ್ನೂ ದಿಗ್ಭ್ರಮೆ ಕೂಡ ಮೂಡಿಸಿದೆ.
ಈ ವಿಡಿಯೋವನ್ನು ವೈಲ್ಡ್‍ಲೆನ್ಸ್ ಇಕೋ ಫೌಂಡೇಶನ್ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಭಾರೀ ಪ್ರಶಂಸೆಗೆ ಕಾರಣವಾಗಿದೆ. ಇದುವರೆಗೆ ವಿಡಿಯೋವನ್ನು ಸಾವಿರಾರು ಮಂದಿ ವೀಕ್ಷಿಸಿದ್ದು, ಕೆಲವರು 5,500ಕ್ಕೂ ಅಧಿಕ ಜನರು ಲೈಕ್ ಮಾಡಿದರೆ, ಅನೇಕರು ರಿಟ್ವೀಟ್ ಮಾಡಿದ್ದಾರೆ.
PublicNext
18/01/2022 10:58 am