ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಡುಗೆ ಮನೆಯಲ್ಲಿ ಅಮ್ಮನ ಶ್ರಮ : ಅತಿಥಿಗಳಿಗೆ ಮನೆ ದಾರಿ ತೋರಿಸಿದ ಪೋರ ವಿಡಿಯೋ ವೈರಲ್

ಸ್ಯಾಲರಿ ಇಲ್ಲದ ಓವರ್ ಟೈಮ್ ಜಾಬ್ ಅಮ್ಮನದ್ದು. ಅವರ ಆಸರಬೇಸರ ಕೇಳುವವರಿಲ್ಲ. ಬಂದವರೆಲ್ಲರನ್ನು ಪ್ರೀತಿಯಿಂದ ಸಂತೈಸುವ ಏಕೈಕ ಜೀವ ಅದು ಅಮ್ಮ. ಹೀಗೆ ಅಮ್ಮ ಟೈಮ್ ಲೇಸ್ ಕೆಲಸ ಮಾಡುವುದನ್ನು ಕಂಡ ಪುತ್ರನೊಬ್ಬ ಮನೆಗೆ ಬಂದ ಅತಿಥಿಗಳ ಮೇಲೆ ಕಿಡಿಕಾರಿದ್ದಾನೆ.

ಹೌದು ವೈರಲ್ ಆದ ವಿಡಿಯೋವೊಂದರಲ್ಲಿ ಪುಟ್ಟ ಪೋರನೊಬ್ಬ ತನ್ನ ತಂದೆಯ ಸ್ನೇಹಿತರು ಮನೆಗೆ ಬಂದಾಗ ಊಟದ ವ್ಯವಸ್ಥೆ ಮಾಡಲಾಗಿತ್ತು. ಗೆಳೆಯರೊಂದಿಗೆ ಆ ಪೋರನ ತಂದೆಯೂ ಊಟಕ್ಕೆ ಕುಳಿತಾಗ ಅಡುವೆ ಮನೆಯಿಂದ ಒಂದೊಂದೆ ಆಹಾರ ಪಾತ್ರೆಗಳನ್ನು ತಂದು ಇಡುತ್ತಿದ್ದ ಪೋರ ಇದ್ದಕ್ಕಿದ್ದಂತೆ ಎಲ್ಲರೂ ಊಟ ಮಾಡಿ ನಿಮ್ಮ ಮನೆಗೆ ಹೋಗಿ ಎಂದಿದ್ದಾನೆ.

ಅತಿಥಿಗಳಿಗಾಗಿ ಅಮ್ಮ ಬಿಡುವಿಲ್ಲದೆ ವಿವಿಧ ಬಗೆಯ ಆಹಾರ ಖಾದ್ಯಗಳನ್ನು ತಯಾರಿಸುತ್ತಿರುವುದನ್ನು ಕಂಡ ಮಗ ಅಮ್ಮನ ಪರ ವಹಿಸಿರುವ ಪರಿ ಎಲ್ಲರ ಮನ ಗೆದ್ದಿದೆ. ಇನ್ನು ವಿಡಿಯೋದಲ್ಲಿ ಪೋರನ ಅಮ್ಮನ ಪ್ರೀತಿ ಕಂಡ ಅತಿಥಿಗಳು ನಸುನಕ್ಕು ಊಟ ಮುಂದುವರೆಸಿದ್ದಾರೆ

Edited By : Nagesh Gaonkar
PublicNext

PublicNext

13/01/2022 07:03 pm

Cinque Terre

99.22 K

Cinque Terre

0

ಸಂಬಂಧಿತ ಸುದ್ದಿ