ಅಲ್ಲಿ ನೋಡಿ ಅದೋ.. ಅಲ್ಲಿ ಒಂದು ನಾಯಿ ಇದ್ದಹಾಗೆ ಇಲ್ವಾ? ಹೌದು ಅಲ್ಲೊಂದು ನಾಯಿ ಇದೆ ಎನ್ನುವವರೇ ಹೆಚ್ಚು ಆದ್ರೆ ಅಲ್ಲಿರುವುದು ನಾಯಿಯಲ್ಲಾ.
ಹಾಗಿದ್ರೆ ಅಲ್ಲಿರುವ ಪ್ರಾಣಿ ಯಾವುದು ಹೇಳಿ ನೋಡುವಾ.. ಈ ವಿಡಿಯೋ ನೋಡಿದ ಅನೇಕರು ಒಂದೊಂದು ಸಲ ನಮ್ಮ ಕಣ್ಣುಗಳನ್ನೇ ನಮಗೆ ನಂಬಲು ಆಗುವುದಿಲ್ಲ ಎನ್ನುವ ಮಾತು ಸತ್ಯ ಎಂದಿದ್ದಾರೆ.
ಎದುರಿಗೆ ಕಾಣುವ ದೃಶ್ಯ ಕಣ್ಣು ಮುಚ್ಚಿ ಕಣ್ಣು ಬಿಡುವಷ್ಟರಲ್ಲಿ ಬೇರೆಯದ್ದೇ ರೀತಿಯಲ್ಲಿ ನಮಗೆ ಗೋಚರವಾಗುತ್ತದೆ. ಸದ್ಯ ವೈರಲ್ ಆದ ವಿಡಿಯೋದಲ್ಲಿ ನಾಯಿಯಂತೆ ಕಂಡರು ಅಲ್ಲಿರುವುದು ಬೆಕ್ಕು.
ದೂರದಲ್ಲಿ ಕಂಡಾಗ ಅದು ಶ್ವಾನದ ಮುಖ... ಶ್ವಾನವೊಂದು ಇಣುಕಿ ನೋಡುತ್ತಿದೆ ಎಂದು ಭಾಸವಾಗುವಂತಹ ಸನ್ನಿವೇಶವದು. ಆದರೆ, ಈ ಸನ್ನಿವೇಶಕ್ಕೆ ಅರೆಕ್ಷಣದಲ್ಲಿ ಒಂದು ಟ್ವಿಸ್ಟ್ ಸಿಗುತ್ತದೆ. ಈ ದೃಶ್ಯ ಖಂಡಿತಾ ಅಚ್ಚರಿ ಮೂಡಿಸುತ್ತದೆ ನಾವು ಹೇಳುವುದಕ್ಕಿಂತಲೂ ನೀವೆ ವಿಡಿಯೋ ನೋಡಿ.
PublicNext
10/01/2022 07:34 am