ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೋಗಿ ಬರುವೆಯಾ ಗೆಳೆಯ : ಕಣ್ಣೀರಿಟ್ಟ ನವಿಲು

ಪ್ರಾಣಿಯಾಗಲಿ,ಪಕ್ಷಿಯಾಗಲಿ ಅಥವಾ ಮನುಷ್ಯರಾಗಲಿ ಹುಟ್ಟು ಸಂಭ್ರಮಿಸುವ ಜೀವಗಳು ಸಾವನ್ನು ಅರಗಿಸಿಕೊಳ್ಳಲು ಕಷ್ಟಪಡುತ್ತವೆ.

ಸದ್ಯ ಇಲ್ಲೊಂದು ವೈರಲ್ ಆದ ವಿಡಿಯೋದಲ್ಲಿ ನವಿಲು, ತನ್ನ ಸತ್ತ ಒಡನಾಡಿಯನ್ನು ಹೊತ್ತೊಯ್ಯುತ್ತಿದ್ದ ಇಬ್ಬರು ವ್ಯಕ್ತಿಗಳ ಬೆನ್ನ ಹಿಂದೆಯೇ ಹೋಗುತ್ತಿರುವ ದೃಶ್ಯ ಮನಕಲಕುವಂತಿದೆ.

ಇಬ್ಬರು ವ್ಯಕ್ತಿಗಳು ನವಿಲಿನ ಸಹಚರನ ಮೃತ ದೇಹವನ್ನು ಹೊತ್ತೊಯ್ದಾಗ, ಸದ್ದಿಲ್ಲದೆ ಅವರಿಬ್ಬರ ಹಿಂದೆಯೇ ಭಾರದ ಹೆಜ್ಜೆಗಳನ್ನಿಡುತ್ತಾ ಸಾಗಿದೆ. ಈ ಹೃದಯಸ್ಪರ್ಶಿ ವಿಡಿಯೋವನ್ನು ಭಾರತೀಯ ಅರಣ್ಯ ಸೇವೆಯ ಅಧಿಕಾರಿ ಪರ್ವೀನ್ ಕಸ್ವಾನ್ ಅವರು ತಮ್ಮ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.

ನವಿಲಿನ ಮೂಕರೋಧನೆ ಕಂಡ ನೆಟ್ಟಿಗರ ಮನಮಿಡಿದಿದೆ.

Edited By : Shivu K
PublicNext

PublicNext

05/01/2022 08:07 pm

Cinque Terre

132.64 K

Cinque Terre

5

ಸಂಬಂಧಿತ ಸುದ್ದಿ