ಪ್ರತಿಯೊಬ್ಬರ ಜೀವನದಲ್ಲಿ ಮದುವೆ ಎಂಬುವುದು ಬಹುದೊಡ್ಡ ಕಲ್ಪನೆ. ಅದು ಸಕಾರಗೊಳ್ಳುವ ಸಮಯದಲ್ಲಾಗುವ ಸಂಭ್ರಮವನ್ನು ಅನುಭವಿಸಿಯೇ ಆನಂದಿಸಬೇಕು.
ಸದ್ಯ ವೈರಲ್ ಆದ ವಿಡಿಯೋವೊಂದರಲ್ಲಿ ಮದುವೆ ಮಂಟಪಕ್ಕೆ ವರ ಬರುವುದನ್ನು ನೋಡಿದ ವಧು ಫುಲ್ ಜೋಶ್ ನಲ್ಲಿ ಸಕ್ಕತ್ ಸ್ಟೆಪ್ ಹಾಕಿದ್ದಾಳೆ.
ಮದುವೆ ಎಂದರೆ ಎಲ್ಲ ವಧು-ವರರಿಗೂ ವಿಶೇಷ ಮದುವೆ ದಿನ ಹತ್ತಿರವಾಗುತ್ತಿದಂತೆ ಸಂಭ್ರಮ ಮನೆ ಮಾಡಿರುತ್ತೆ. ಇನ್ ಸ್ಟಾಗ್ರಾಮ್ ನ ವಿಟ್ಟಿ_ವೆಡ್ಡಿಂಗ್ ಖಾತೆಯಲ್ಲಿ ಈ ವೀಡಿಯೊವನ್ನು ಪೋಸ್ಟ್ ಮಾಡಿದ್ದು, ನೆಟ್ಟಿಗರು ವಿಡಿಯೋವನ್ನು ಫುಲ್ ಎಂಜಯ್ ಮಾಡುತ್ತಿದ್ದಾರೆ.
ವಧು ಕಿಟಕಿಯ ಬಳಿ ನಿಂತಿಕೊಂಡು ತನ್ನ ಭಾವಿ ಪತಿಗಾಗಿ ಕಾಯುತ್ತಿರುತ್ತಾಳೆ. ನಂತರ ಮದುವೆ ಮನೆಗೆ ವರನ ದಿಬ್ಬಣ ಬರುತ್ತಿದ್ದಂತೆ ಆತನನ್ನು ನೋಡುತ್ತಾ ವಧು ಕುಣಿದು ಕುಪ್ಪಳಿಸಿದ್ದಾಳೆ.
PublicNext
03/01/2022 12:22 pm