ಬ್ಯಾಂಕಾಕ್: ಆನೆಗಳದ್ದು ಧಡೂತಿ ದೇಹ ಇರಬಹುದು. ಅವು ಕೆಲವೊಮ್ಮೆ ಕೆರಳಿ ಪುಂಡಾಟಿಕೆ ತೋರಬಹುದು ಆದ್ರೆ ಆನೆಗಳಿಗೂ ಸಂವೇದನಾ ಶೀಲ ಗುಣಗಳಿರುತ್ತವೆ. ಇದಕ್ಕೆ ಈ ವಿಡಿಯೋನೇ ಸಾಕ್ಷಿ.
ಮಾಲೀಕನಿಂದ ದೂರವಾಗಿ 14ತಿಂಗಳು ಕಳೆದರೂ ಆನೆಗಳು ಆತನನ್ನು ಮರೆತಿಲ್ಲ. ಅಭಯಾರಣ್ಯಕ್ಕೆ ವಾಪಸ್ ಬಂದ ಆನೆಗಳು ತಮ್ಮ ಪಾಲಕ ಡೆರಕ್ ಥಾಂಪ್ಸನ್‌ನನ್ನು ಕಂಡು ಧಾವಿಸಿ ಬಂದಿವೆ. ಮತ್ತು ಆತನನ್ನು ಸುತ್ತುವರೆದು ಅಕ್ಕರೆ ತೋರಿವೆ. ಸೊಂಡಿಲಿನಿಂದ ತಬ್ಬಿಕೊಂಡು ತಮ್ಮದೇ ಭಾಷೆಯಲ್ಲಿ ಅಗಲುವಿಕೆಯ ನೋವು ಹೇಳಿಕೊಂಡಿವೆ.
ಈ ವಿಡಿಯೋ ನೋಡಿದ ಜನ ಇದು ಮಾನವ-ಪ್ರಾಣಿಗಳ ನಡುವಿನ ಭಾವನಾತ್ಮಕ ನಂಟಿನ ಅಪರೂಪದ ದೃಶ್ಯ ಎಂದು ಬಣ್ಣಿಸುತ್ತಿದ್ದಾರೆ.
PublicNext
28/12/2021 11:59 am