ಮನುಷ್ಯರಲ್ಲಿ ಮರೆಯಾಗುತ್ತಿರುವ ಮಾನವೀಯತೆ ಪ್ರಾಣಿಗಳಲ್ಲಿ ಜೀವಂತವಾಗಿದೆ. ಇಲ್ಲೊಂದು ಪಾಳು ಬಾವಿಯಲ್ಲಿ ಬಿದ್ದ ಬೆಕ್ಕಿನ ಮರಿಯನ್ನು ಮೇಲೆತ್ತಲು ಕೋತಿ ಮರಿಯೊಂದು ಪ್ರಯತ್ನಿಸುತ್ತಿರುವ ಪರಿ ಅತ್ಯದ್ಭುತವಾಗಿದೆ.
ನಿತ್ಯ ಸಾಮಾಜಿಕ ಜಾಲತಾಣಗಳಲ್ಲಿ ಹತ್ತಾರು ವಿಡಿಯೋಗಳು ವೈರಲ್ ಆಗುತ್ತವೆ. ಅವುಗಳಲ್ಲಿ ಕೆಲವು ನೀತಿ ಪಾಠ ಹೇಳಿಕೊಡುತ್ತವೆ. ಆ ಸಾಲಿನಲ್ಲಿಯೇ ಈ ವಿಡಿಯೋ ಕೂಡಾ ಒಂದಾಗಿದೆ.
ಸದ್ಯ ಭಾರತೀಯ ಅರಣ್ಯ ಸೇವೆಗಳ ಅಧಿಕಾರಿ ಸುಸಂತ ನಂದ ಅವರು ಈ ವಿಡಿಯೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡು Be this monkey in our troubled world Credit in the video ಶೀರ್ಷಿಕೆ ಬರೆದಿದ್ದಾರೆ.
PublicNext
21/12/2021 10:46 am