ಪ್ರಕೃತಿ ವಿಸ್ಮಯಗಳು ಮನುಷ್ಯರ ಊಹೆ, ಕಲ್ಪನೆಗೂ ಮೀರಿದ್ದು. ಆಳ ಹೊಕ್ಕು ಸಂಶೋಧಿಸಿದರೂ ಪ್ರಕೃತಿ ಎಂಬುದು ಬಗೆದಷ್ಟು ನಿಗೂಢ. ತಿಳಿದಷ್ಟು ವಿಸ್ತಾರ.
ಹಾವು ಮೀನು ಮೊಸಳೆಯೊಂದನ್ನು ಕಚ್ಚಿ ಕರೆಂಟ್ ಶಾಕ್ ಕೊಟ್ಟ ಅಪರೂಪದಲ್ಲೇ ಅಪರೂಪ ಎನ್ನಬಹುದಾದ ಘಟನೆ ನಡೆದಿದೆ. ನದಿ ತಟದಲ್ಲಿ ಮುಖ ಹೊರಗೆ ಹಾಕಿ ವಿರಮಿಸಲು ಬಂದ ಹಾವುಮೀನನ್ನು ತಿನ್ನಲು ಮೊಸಳೆ ಮುಂದಾಗಿದೆ. ಆಗ ಹಿಂಬದಿಯಲ್ಲಿ ಬಂದ ಬೇರೊಂದು ಮೀನು ಮೊಸಳೆಯನ್ನೇ ಕಚ್ಚಿ 860 ವೋಲ್ಟ್ ಕರೆಂಟ್ ಶಾಕ್ ಕೊಟ್ಟು ನಿತ್ರಾಣ ಮಾಡಿದೆ. ಮೊಸಳೆಗೆ ಕಚ್ಚಿದ ಮೀನು ಯಾವ ಪ್ರಬೇಧದ್ದು ಎಂಬುದು ವಿಡಿಯೋದಲ್ಲಿ ಸ್ಪಷ್ಟವಾಗಿ ತಿಳಿಯುತ್ತಿಲ್ಲ. ಸದ್ಯ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗುತ್ತಿದೆ.
PublicNext
20/12/2021 03:30 pm