ಪುಟ್ಟ ನಾಯಿಮರಿಗೆ ತನ್ನೆದುರು ಇರೋದು ಪರ್ವತ ಸಿಂಹ ಅಂತ ಗೊತ್ತೇ ಇಲ್ಲ. ಮನೆಯ ಗಾಜಿನ ಡೋರ್ ಒಳಗೆ ನಿಂತು ಬಾಲ ಅಲ್ಲಾಡಿಸಿದೆ. ಇದನ್ನ ಕಂಡ ನಾಯಿ ಓನರ್ ಸಾರಾ ಬೋಲೆ, ಪ್ರೀತಿಯ ನಾಯಿಯನ್ನ ಒಳಗೆ ಬಾ ಅಂತಲೂ ಕರೆದಿದ್ದಾರೆ.ಆದರೆ ನಾಯಿ ಒಳಗೆ ಬರಲಿಲ್ಲ. ಹೊಂಚು ಹಾಕಿ ನಿಂತ ಸಿಂಹ ಅಲ್ಲಿಂದ ಹೋಗಲೇ ಇಲ್ಲ. ಮುಂದೇನಾಯ್ತು ನೀವೇ ನೋಡಿ.
ಡಿಸೆಂಬರ್-03 ರಂದು ಈ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ಅಪ್ ಲೋಡ್ ಆಗಿದೆ. ಈಗಲೂ ಈ ವಿಶೇಷ ವೀಡಿಯೋವನ್ನ ಜನ ನೋಡ್ತಾನೇ ಇದ್ದಾರೆ. ಅದಕ್ಕೇನೆ ಈ ವೈರಲ್ ವೀಡಿಯೋದ ವೀಕ್ಷಕರ ಒಟ್ಟು ಲೆಕ್ಕ 2 ಲಕ್ಷಕ್ಕೂ ಹೆಚ್ಚಿದೆ.
ಅಂದ್ಹಾಗೆ ನಾಯಿ ಕೊನೆವರೆಗೂ ಬಾಲ ಅಲ್ಲಾಡಿಸುತ್ತಲೇ ಇತ್ತು. ಹೊಂಚು ಹಾಕುತ್ತಲೇ ನಿಂತಿದ್ದ ಸಿಂಹ ಬೇಜಾರ್ ಆಗಿ, ಅಲ್ಲಿಂದ ಹೊರಟು ಹೋಗಿದೆ. ನಾಯಿ ಕೂಡ ಸಿಂಹ ಹೋದ್ಮಲೇ ಹೆಚ್ಚು ಟೈಮ್ ಅಲ್ಲಿ ನಿಲ್ಲದೇ ಮನೆಯೊಳಗೆ ಬಂದು ಬಿಟ್ಟಿದೆ.
PublicNext
14/12/2021 05:51 pm