ಖುಷಿಯಾಗಿರೋದಕ್ಕೆ ಏನೇನೋ ಮಾಡೋ ಬದಲು ಇರೋದ್ರಲ್ಲೇ ಖುಷಿ ಹುಡುಕಿಕೊಳ್ಬೇಕು ಅನ್ನೋದನ್ನ ಈ ಪುಟ್ಟ ಪೋರ ತೋರಿಸಿಕೊಟ್ಟಿದ್ದಾನೆ ನೋಡಿ. ಮಹಾರಾಷ್ಟ್ರ ದಲ್ಲಿ ಕಂಡು ಬಂದ ಈ ದೃಶ್ಯ ಸದ್ಯ ಎಲ್ಲೆಡೆ ವೈರಲ್ ಆಗಿದೆ. ಪೊಲೀಸ್ ಬ್ಯಾರಿಕೇಡ್‌ನಲ್ಲೇ ಜೋಕಾಲಿ ಕಟ್ಟಿ ಅದ್ರಲ್ಲಿ ಈ ಬಾಲಕ ಅಟ ಆಡ್ತಿರೋ ದೃಶ್ಯ ಎಲ್ಲರ ಗಮನ ಸೆಳೆದಿದೆ. ಅದಿಲ್ಲ ಇದಿಲ್ಲ ಅಂತ ಕೊರಗುವವರ ನಡುವೆ ಇದ್ದುದರಲ್ಲೇ ಖುಷಿ ಪಡ್ತಿರೋ ಈ ಬಾಲಕ ನಮ್ಮೆಲ್ಲರ ಬದುಕಿಗೆ ಸರಳತೆಯ ಪಾಠವನ್ನ ಕಲಿಸಿದಂತಿದೆ.
PublicNext
08/12/2021 02:40 pm