ಪಾನಿಪುರಿ ಅಂದ್ರೆ ಗೋಲ್ ಗಪ್ಪ ಈ ಹೆಸರು ಕೇಳುತ್ತಿದ್ದಂತೆ ಎಲ್ಲರ ಬಾಯಲ್ಲಿ ನೀರೂರುವುದು ಸಾಮಾನ್ಯ. ಸಂಜೆಯಾಗುತ್ತಿದ್ದಂತೆ ಪಾನಿಪುರಿ ತಿನ್ನಬೇಕು ಅಂತಾ ಹಂಬಲಿಸುವವರ ಸಂಖ್ಯೆ ತುಸು ಹೆಚ್ಚಿದೆ ಅಂದ್ರೆ ತಪ್ಪಾಗಲಾರದು.
ಚಾಟ್ ಸೆಂಟರ್ ಕಂಡೊಡನೆ ಏಕ್ ಪ್ಲೇಟ್ ಪಾನಿಪುರಿ ಎನ್ನುವವರು ಈಗಾ ಬೆಂಕಿ ಪಾನಿಪುರಿ ತಿನ್ನಲು ಮುಂದಾಗುತ್ತಿರುವ ವಿಡಿಯೋ ವೈರಲ್ ಆಗಿದೆ.
ನಮ್ಮನ್ನು ಅಚ್ಚರಿಗೊಳಿಸುವ ದೃಶ್ಯಗಳಲ್ಲಿ ಇದು ಒಂದು. ಪಾನ್ ಬೀಡಾವನ್ನು ಬೆಂಕಿಯೊಂದಿಗೆ ನೀಡುವ ದೃಶ್ಯಗಳನ್ನು ಎಲ್ಲರೂ ನೋಡಿರುತ್ತೇವೆ.
ಈಗ ಬೆಂಕಿ ಗೋಲ್ ಗಪ್ಪದ ದೃಶ್ಯ ವೈರಲ್ ಆಗಿದೆ. ಅಹಮದಾಬಾದ್ನಲ್ಲಿ ಸೆರೆಯಾದ ದೃಶ್ಯದಲ್ಲಿ ಯುವತಿಯೊಬ್ಬರು ಬೆಂಕಿ ಗೋಲ್ಗಪ್ಪವನ್ನು ಸವಿಯುವ ದೃಶ್ಯ ವೈರಲ್ ಆಗಿದೆ.
ಫುಡ್ ಬ್ಲಾಗರ್ ಒಬ್ಬರು ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
PublicNext
05/12/2021 04:41 pm