ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವೇಯ್ಟರ್ ಸಮಯಪ್ರಜ್ಞೆ ಮಗು ಪಾರು : ವಿಡಿಯೋ ವೈರಲ್

ತುಂಟ ಮಕ್ಕಳೊಂದಿಗೆ ಹೊರ ಹೋದಾಗ ತುಸು ಜಾಸ್ತಿ ಜಾಗರೂಕರಾಗಿರಿ. ಕೊಂಚ ಮೈ ಮರೆತರು ಮಕ್ಕಳು ಏನು ಮಾಡುತ್ತಾರೊ ಗೊತ್ತಾಗುವುದಿಲ್ಲ.

ಸದ್ಯ ಅಮ್ಮನ ಜೊತೆ ರೆಸ್ಟೋರೆಂಟ್ ಗೆ ಬಂದ ಮಗುವೊಂದು ವೇಯ್ಟರ್ ಸಮಯಪ್ರಜ್ಞೆಯಿಂದ ಬದುಕುಳಿದಿದೆ. ಆ ಕುರಿತ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಈ ರೀತಿ ಹೃದಯವಂತರು ತೋರುವ ಕಾಳಜಿ, ಸಮಯೋಚಿತ ನಡೆಗಳು ಆಗಾಗ ಕಾಣಸಿಗುತ್ತವೆ. ಜೊತೆಗೆ ಬಹುಬೇಗ ನಮ್ಮ ಗಮನ ಸೆಳೆಯುವಲ್ಲಿಯೂ ಯಶಸ್ವಿಯಾಗುತ್ತವೆ.

ವೇಯ್ಟರ್ ತೋರಿದ ಸಮಯಪ್ರಜ್ಞೆಯಿಂದ ಪುಟ್ಟ ಮಗು ದೊಡ್ಡ ಅಪಾಯದಿಂದ ಪಾರಾಗಿದೆ. ಸಿಸಿ ಕ್ಯಾಮೆರಾದಲ್ಲಿ ಸೆರೆಯಾದ ಈ ದೃಶ್ಯ ನೆಟ್ಟಿಗರ ಹೃದಯ ಗೆದ್ದಿದೆ.

ಐಪಿಎಸ್ ಅಧಿಕಾರಿ ದೀಪಾನ್ಶು ಕಬ್ರಾ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಂಡಿದ್ದಾರೆ.

Edited By : Shivu K
PublicNext

PublicNext

30/11/2021 06:01 pm

Cinque Terre

62.3 K

Cinque Terre

1

ಸಂಬಂಧಿತ ಸುದ್ದಿ