ಸಾಹಸ ಅನ್ನೋದು ಕೇವಲ ಹುಡುಗರಿಗೆ ಸೀಮಿತ ಅಲ್ಲವೇ ಅಲ್ಲ. ಇತಿಹಾಸ ಪುಟ ತಿರುವಿದರೆ ಸಾಕು.ವೀರ ವನಿತೆಯರ ಹೆಸರು ಸಾಲು ಸಾಲು ಸಿಗುತ್ತವೆ. ಇದು ಇತಿಹಾಸ ಆಯ್ತು ಬಿಡಿ. ಆದರೆ ಈಗಿನ ಟೈಮ್‌ನಲ್ಲಿ ಸಾಹಸದ ವಿಷಯದಲ್ಲಿ ಹೆಣ್ಣುಮಕ್ಕಳು ಮತ್ತು ಗಂಡು ಮಕ್ಕಳು ಅನ್ನೋ ಭೇದ-ಭಾವವೇ ಇಲ್ಲ. ಇದಕ್ಕೆ ಇಲ್ಲಿದೆ ಒಂದು ದಿ ಬೆಸ್ಟ್ ಎಕ್ಸಾಂಪಲ್ ನೋಡಿ.
ಸಮರ ಕಲೆ ಅನ್ನೋದು ಈಗ ಎಲ್ಲರೂ ಕಲಿಯುವ ಕಲೆ. ಹುಡುಗಿಯರು ಚಿಕ್ಕಂದಿನಲ್ಲಿಯೇ ಈ ಕಲೆಯನ್ನ ಕಲೆಯುತ್ತಿದ್ದಾರೆ. ಇವರ ದೈಹಿಕ ಶಕ್ತಿಯನ್ನ ಇನ್ನಷ್ಟು ಹೆಚ್ಚಿಸೋ ಈ ಕಲೆಯನ್ನ, ಇಲ್ಲೊಬ್ಬ ಹುಡುಗಿ ಅದ್ಭುತವಾಗಿಯೇ ಕರಗತ ಮಾಡಿಕೊಂಡಿದ್ದಾಳೆ. ಈಕೆಯ ಈ ಅಭ್ಯಾಸದ ವೀಡಿಯೋವನ್ನ ಛತೀಸ್‌ಗಢನ ಐಪಿಎಸ್ ಅಧಿಕಾರಿ ಅಂಕಿತಾ ಶರ್ಮಾ ತಮ್ಮ ಟ್ವಿಟರ್ ಪೇಜ್ ನಲ್ಲೂ ಶೇರ್ ಮಾಡಿಕೊಂಡು ವೈರಲ್ ಮಾಡುತ್ತಿದ್ದಾರೆ.
PublicNext
28/11/2021 07:43 pm