ಆನೆ ಅಂದ್ರೆ ನಮಗೆ ವಿಶೇಷವಾದ ಭಕ್ತಿ ಮತ್ತು ಪ್ರೀತಿ. ಆನೆಯನ್ನ ನಾವು ವಿಘ್ನವಿನಾಶಕ ಅಂತಲೂ ಭಾವಿಸುತ್ತವೇ. ಅದೇ ಆನೆ ಫ್ಯಾಷನ್ ಗೀಳಿಗೆ ಬಿದ್ದರೆ ಹೇಗೆ ? ನಿಜ, ಇಲ್ಲೊಂದು ಆನೆ ಬಾಬ್ ಕಟ್ ಮಾಡಿಸಿಕೊಂಡಿದೆ.ಆ ಬಾಬ್ ಕಟ್ ಅನ್ನ ದಿನವೂ ಮಾವುತ ಬಾಚಲೇ ಬೇಕು. ಅದೇ ವೀಡಿಯೋ ಈಗ ವೈರಲ್ ಆಗಿದೆ.
ಕೊಯುಮತ್ತೂರಿನ ತೆಕ್ಕಂಪಟ್ಟಿಯಲ್ಲಿರೋ ಈ ಆನೆ ಭಾರಿ ವೈರಲ್ ಆಗುತ್ತಿದೆ. ತನ್ನ ಬಾಬ್ ಕಟ್ ನಿಂದಲೇ ಜನರ ಮನಸನ್ನ ಸೆಳೆಯುತ್ತಿದೆ. ಆನೆಯ ವೀಡಿಯೋ ನೋಡಿದ ಜನ ಫುಲ್ ಖುಷ್ ಆಗುತ್ತಿದ್ದಾರೆ. ಲೈಕ್ಸ್ ಕಾಮೆಂಟ್ಸ್ ಅಂತೂ ಸಾಕಷ್ಟು ಬರುತ್ತಿವೆ. ಅದಕ್ಕೇನೆ ಇದು ಹೆಚ್ಚು ಹೆಚ್ಚು ಜನರನ್ನ ಸೆಳೆಯುತ್ತಿದೆ.
PublicNext
20/11/2021 02:33 pm