ಅಪಾಯಕಾರಿ ರಸ್ತೆಯಲ್ಲಿ ಪ್ರಯಾಣಿಸುವಾಗ ಸಿಕ್ಕಾಪಟ್ಟೆ ಹುಷಾರಾಗಿರಬೇಕು ಕೊಂಚ ಅವಸರ ಮಾಡಿದ್ರು ಆಗುವುದು ಅನಾಹುತ.
ಸದ್ಯ ವೈರಲ್ ಆದ ವಿಡಿಯೋದಲ್ಲಿ ಬೈಕ್ ಸವಾರನೊಬ್ಬ ಟ್ರಕ್ಕನ್ನು ಓವರ್ ಟೇಕ್ ಮಾಡಲು ಮುಂದಾಗಿ ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾರೆ.
ಇನ್ನು ಈ ಭಯಾನಕ ದೃಶ್ಯ ನೋಡುವಾಗ ಒಂದು ಕ್ಷಣ ಎದೆ ಝಲ್ ಎಂದಂತಾಗುತ್ತದೆ. ಕಾಶ್ಮೀರ ಮತ್ತು ಲಡಾಖ್ ನಡುವಿನ ಪ್ರಮುಖ ಸಂಪರ್ಕ ರಸ್ತೆಯಾದ ಝೋಜಿಲಾ ಪಾಸ್ ನಲ್ಲಿ ನಡೆದ ಘಟನೆ ಇದಾಗಿದ್ದು ಭೂಪೇಂದರ್ ಜಾತ್ ಎಂಬವರು ತಮ್ಮ ಯುಟ್ಯೂಬ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದರು.
PublicNext
18/11/2021 04:00 pm