ಉತ್ತರ ಭಾರತದಲ್ಲಿ ನಡೆದ ಒಂದು ವೀಡಿಯೋ ವೈರಲ್ ಆಗಿದೆ. ಆದರೆ ಇದು ಇತರ ವೈರಲ್ ವೀಡಿಯೋ ರೀತಿ ಇಲ್ಲವೇ ಇಲ್ಲ. ಇದು ಒಂದು ರೀತಿ ಜನ ಜಾಗೃತಿ ಮೂಡಿಸೋ ವೀಡಿಯೋ ರೀತಿನೇ ಇದೆ.ಇದನ್ನ ನೀವೂ ಕಂಡ್ರೆ ಮಧ್ಯೆ ರಾತ್ರಿ ರಸ್ತೆಯಲ್ಲಿ ಯಾರೇ ನಿಂತರೂ ಸರಿಯೇ. ಕಾರ್ ನಿಲ್ಲಿಸಲೇಬೇಡ ಅಂತಲೇ ಹೇಳ್ತಿದೆ ಈ ವೀಡಿಯೋ. ನೀವೂ ನೋಡಿ.
ನಡು ರಾತ್ರಿ ರಸ್ತೆ ಮಧ್ಯೆ ಒಬ್ಬಳು ಹುಡುಗಿ ಲಿಫ್ಟ್ ಆಗಿಯೆ ನಿಂತಿರುತ್ತಾಳೆ. ಅದನ್ನ ಕಂಡ ಚಾಲಕ ಕಾರ್ ನಿಲ್ಲಿಸುತ್ತಾನೆ. ಆಗ ಕಾರ್ ಬಳಿ ಬಂದ ಆ ಹುಡುಗಿ ಲಿಫ್ಟ್ ಕೇಳುತ್ತಾಳೆ. ಕಾರ್ ಚಾಲಕ ಎಲ್ಲಿ ಅಂತ ಕೇಳ್ತಾನೆ. ಆಗ ಅವಳು ಕಾರ್ ಒಳಗೆ ಬರಲು ರೆಡಿ ಆಗ್ತಾಳೆ. ಅದೇ ವೇಳೆ ಕಾರ್ ಚಾಲಕ ಮನಸ್ಸು ಚೇಂಜ್ ಮಾಡಿ ಲಿಫ್ಟ್ ಕೊಡೋದಿಲ್ಲ ಅಂತಲೇ ಹೇಳಿ ಕಾರ್ ಗ್ಲಾಸ್ ಇಳಿಸಲು ಮುಂದಾಗ್ತಾನೆ.
ಇಷ್ಟು ಆಗಿದ್ದೇ ತಡ, ಲಿಫ್ಟ್ ಕೇಳಲು ಬಂದ ಹುಡುಗಿ ಕಾರ್ ಮುಂದೇನೆ ಬಂದು ನಿಂತು ಬಿಡ್ತಾಳೆ. ನಾಲ್ಕೈದು ಜನ ಆಗ ಬಂದು ಕಾರ್ ಮೇಲೆ ಅಟ್ಯಾಕ್ ಕೂಡ ಮಾಡ್ತಾರೆ.ಕಾರ್ ಅಲ್ಲಿಯೇ ಇದ್ದ ಇನ್ನೊಬ್ಬ ವ್ಯಕ್ತಿ ಇದನ್ನೆಲ್ಲ ವೀಡಿಯೋ ಮಾಡಿಕೊಳ್ತಾನೆ. ಹಾಗೂ ಹೀಗೂ ಅಲ್ಲಿಂದ ಅವರು ತಪ್ಪಿಸಿಕೊಳ್ತಾರೆ. ಅಬ್ಬ ಬದುಕಿದೆವೂ ಅಂತಲೂ ಮಾತಾಡಿಕೊಳ್ತಾರೆ. ಈ ವೀಡಿಯೋ ಸದ್ಯ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಜೊತೆಗೆ ಜಾಗೃತಿಯನ್ನೂ ಮೂಡಿಸುತ್ತಿದೆ.
PublicNext
15/11/2021 03:04 pm