ಅರುಣಾಚಲ ಪ್ರದೇಶ: ಹೆಣ್ಣುಮಕ್ಕಳಿಗೆ ಮಮತೆ ಅನ್ನೋದು ಹುಟ್ಟುತ್ತಲೇ ಇರುತ್ತದೆ. ಅಮ್ಮನನ್ನ ಅನುಕರಣೆ ಮಾಡುತ್ತಲೇ ಎಲ್ಲವನ್ನೂ ಕಲಿತು ಬಿಡುವ ಹೆಣ್ಣುಮಕ್ಕಳು ನಿಜಕ್ಕೂ ಮಮತಾಮಯಿಗಳೇ.ಮಮತೆಗೆ,ಪ್ರೀತಿ ತೋರುವುದಕ್ಕೆ ಇವರಿಗೆ ವಯಸ್ಸಿನ ಹಂಗೇ ಇಲ್ಲ.ಅದನ್ನ ವ್ಯಕ್ತಪಡಿಸುವ ಒಂದು ವೀಡಿಯೋ ಈಗ ವೈರಲ್ ಆಗಿದೆ.
ಅರುಣಾಚಲ ಪ್ರದೇಶದ ಶಾಲೆಯಲ್ಲಿ ಪುಟ್ಟ ಹುಡುಗಿ ತನ್ನ ಸಹಪಾಠಿಗೆ ಸಂತೈಸುತ್ತಾಳೆ. ಶಾಲೆಗೆ ಬಂದ ಆ ಹುಡುಗ ಅಳುವ ಮುಖದಲ್ಲಿಯೇ ಕುಳಿತಿರುತ್ತಾನೆ. ಅವನ ಬೇಸರವನ್ನ ತಿಳಿದ ಸಹಪಾಠಿ ಹುಡುಗಿ, ಅವನ ಬಳಿಗೆ ಹೋಗಿ ಪ್ರೀತಿಯಿಂದ, ಮಮತೆಯಿಂದ ಮಾತನಾಡಿಸುತ್ತಾಳೆ. ಆ ವೀಡಿಯೊ ಈಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
PublicNext
10/11/2021 04:45 pm