ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಫೋನ್ ತಂದ ಆಪತ್ತು:ಮ್ಯಾನ್ ಹೋಲ್ ಗೆ ಬಿದ್ದ ಮಗು-ಮಹಿಳೆ

ಫರಿದಾಬಾದ್: ಇಲ್ಲಿಯ ಜವಾಹರ್ ಕಾಲೋನಿಯಲ್ಲಿ ರಸ್ತೆಮಧ್ಯೆ ಮ್ಯಾನ್ ಹೋಲ್ ಓಪನ್ ಆಗಿದೆ. ಓಡಾಡುವ ಜನ ಜಾರಿ ಮ್ಯಾನ್ ಹೋಲ್ ಗೆ ಬೀಳಬಾರದು ಅಂತಲೇ ಇಲ್ಲಿಯ ಅಂಗಡಿಯವನು ಬೋರ್ಡ್ ಕೂಡ ಇಟ್ಟಿದ್ದಾನೆ. ಆದರೂ, ಮಗು ಎತ್ತಿಕೊಂಡು ಫೋನ್ ನಲ್ಲಿ ಮಾತನಾಡುತ್ತಾ ಬರೋ ಮಹಿಳೆ,ಇಟ್ಟ ಬೋರ್ಡ್ ಅನ್ನೂ ಲೆಕ್ಕಿಸದೇ ಜಾರಿ ಮ್ಯಾನ್ ಹೋಲ್ ನಲ್ಲಿ ಬೀಳುತ್ತಾರೆ. ತಕ್ಷಣವೇ ಅಲ್ಲಿದ್ದ ಜನ ಮಗು ಮತ್ತು ಮಹಿಳೆಯನ್ನ ಮ್ಯಾನ್ ಹೋಲ್ ನಿಂದ ಹೊರಗೆ ತೆಗೆದು ರಕ್ಷಿಸಿದ್ದಾರೆ. ಮ್ಯಾನ್ ಹೋಲ್ ಮುಚ್ಚದೇನೆ ನಿರ್ಲಕ್ಷ ತೋರಿದ ಮುನ್ಸಿಪಲ್ ಕಾರ್ಪೋರೇಷನ್ ಗೆ ಇಲ್ಲಿನ ಜನ ಹಿಡಿ ಶಾಪ ಹಾಕುತ್ತಿದ್ದಾರೆ. ಮಹಿಳೆ ಮ್ಯಾನ್ ಹೋಲ್ ಗೆ ಬಿದ್ದ ಸಿಸಿಟಿವಿ ವೀಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಅತಿ ಹೆಚ್ಚು ಗಮನ ಸೆಳೆಯುತ್ತಿದೆ. ಅಯ್ಯೋ ಪಾಪವೇ ಅಂತಲೇ ಹೇಳುವಂತೇನೆ ಮಾಡಿದೆ.

Edited By : Nagesh Gaonkar
PublicNext

PublicNext

20/10/2021 07:50 pm

Cinque Terre

66.62 K

Cinque Terre

1

ಸಂಬಂಧಿತ ಸುದ್ದಿ