ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕ್ಯಾನ್ಸರ್ ಮುಕ್ತ ಮಗನೊಂದಿಗೆ ಹೆಜ್ಜೆ ಹಾಕಿದ ಅಪ್ಪ : ವಿಡಿಯೋ ವೈರಲ್

ಯಾವುದೇ ವ್ಯಕ್ತಿಗೆ ಆಗಲಿ ಕ್ಯಾನ್ಸರ್ ಇದೆ ಎಂದರೇ ಭೀತಿ ಶುರುವಾಗದು ಸಾಮಾನ್ಯ. ಅದೇ ರೀತಿ’ಕ್ಯಾನ್ಸರ್ ಮುಕ್ತ’ ಎಂಬ ಪದ ಅಷ್ಟೇ ನಿರಾಳತೆ ನೀಡುವುದು.

ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋವೊಂದರಲ್ಲಿ ತನ್ನ ಮಗ ಕ್ಯಾನ್ಸರ್ ಮುಕ್ತ ಎಂದು ತಿಳಿದ ಅಪ್ಪನ ಖುಷಿಗೆ ಪಾರವೇ ಇರಲಿಲ್ಲ. ಇನ್ನು ಅಪ್ಪ-ಮಗ ಇಬ್ಬರೂ ಖುಷಿಯಲ್ಲಿ ಹೆಜ್ಜೆ ಹಾಕಿದ ವಿಡಿಯೋ ನೆಟ್ಟಿಗರ ಮನ ಗೆದ್ದಿದೆ.

ಮಗುವಿನ ತಂದೆ ಕೆನ್ನಿತ್ ಅಲನ್ ಥಾಮ್ಸನ್ ಈ ವಿಡಿಯೋ ಅಪ್ಲೋಡ್ ಮಾಡಿದ್ದಾರೆ. “ಶ್ರೇಷ್ಠ ನಾಯಕರಿಗೆ ಯಶಸ್ಸಿನ ಹಾದಿಯಲ್ಲಿ ಸಾಗಲು ವಿಶ್ವಾಸ ಹೇಗೆ ಪಡೆದುಕೊಳ್ಳಬೇಕೆಂದು ಗೊತ್ತಿರುತ್ತದೆ,” ಎಂದು ವಿಡಿಯೋಗೆ ಅಡಿಬರಹ ಬರೆಯಲಾಗಿದೆ.

Edited By : Manjunath H D
PublicNext

PublicNext

19/10/2021 04:25 pm

Cinque Terre

31.83 K

Cinque Terre

0

ಸಂಬಂಧಿತ ಸುದ್ದಿ