ಮನುಷ್ಯನಂತೆಯೇ ಜಲರಾಶಿಗಳು ಪ್ರೀತಿಗಾಗಿ, ಆರೈಕೆಗಾಗಿ ಹಾತೊರೆಯುತ್ತವೆ ಇದು ಪ್ರಕೃತಿಯಲ್ಲಿ ಸಹಜ.
ಹೌದು ಸ್ಕೂಬಾ ಡೈವರ್ ಬೆನ್ ಬುರ್ವಿಲ್ಲೆಗೆ ಆಳದ ಸಾಗರಕ್ಕೆ ಇಳಿಯಲು ಹೆಚ್ಚು ಉತ್ಸುಕತೆ ಹೊಂದಿರುವ ವ್ಯಕ್ತಿ. ಇವರು ಕಳೆದ 20 ವರ್ಷಗಳಿಂದ ಸಾಗರದಾಳದ ವಿಸ್ಮಯದ ಅನ್ವೇಷಣೆ ಮಾಡುತ್ತಲಿದ್ದಾರೆ.
ವೃತ್ತಿಯಲ್ಲಿ ವೈದ್ಯರಾಗಿರುವ ಇವರು ಅಟ್ಲಾಂಟಿಕ್ ಸಾಗರದ ಭಾಗವಾದ ನಾರ್ತ್ ಸಮುದ್ರ ವಲಯದಲ್ಲಿ ಸ್ಕೂಬಾ ಡೈವರ್ ಗಳ ಪೈಕಿ ಬೆನ್ ಹೆಸರು ಜನಪ್ರಿಯ.
ಬೆನ್ ನಾರ್ತ್ ಸಾಗರದಲ್ಲಿ ಅಪರೂಪದ ಬೂದು ಬಣ್ಣದ ನೀರು ನಾಯಿಯೊಂದು ಕಂಡಿದ್ದಾರೆ. 'ಸೀಲ್' ಅಥವಾ ನೀರುನಾಯಿ ಹಾನಿಕಾರಕ ಜಲಜೀವಿ ಅಲ್ಲ. ಡಾಲ್ಫಿನ್ ಗಳಂತೆ ಮನುಷ್ಯರನ್ನು ಕಂಡರೆ ಬಹಳ ಇಷ್ಟಪಡುವ ಪ್ರಾಣಿ.
ನೋಡನೋಡುತ್ತಿದ್ದಂತೆ ಡೈವರ್ ಬೆನ್ ಹತ್ತಿರಕ್ಕೆ ಬಂದು ತನ್ನನ್ನು ಮುದ್ದು ಮಾಡುವಂತೆ ಸನ್ನೆ ಮಾಡಿದೆ ಸೀಲ್, ಕೊನೆಗೆ ಬೆನ್ ಗೆ ಒಂದು ಅಪ್ಪುಗೆಯನ್ನು ಕೊಟ್ಟಿದೆ.
ಸದ್ಯ ಈ ವಿಡಿಯೊ ಟ್ವಿಟರ್ ನಲ್ಲಿ ವೈರಲ್ ಆಗುತ್ತಿದೆ.
PublicNext
16/10/2021 03:39 pm