ಜಗತ್ತಿನಲ್ಲಿ ಅಪರೂಪದ ವಿಚಿತ್ರ ಎನಿಸುವ ಘಟನೆಗಳು ಸಂಭವಿಸುತ್ತಲೇ ಇರುತ್ತವೆ ಅದರಂತೆ ರೈತಾಪಿ ಬದುಕಲ್ಲೂ ಇವು ಸಾಮಾನ್ಯ.
ಹೀಗೆ ರೈತನ ಭತ್ತದ ಹೊಲದಲ್ಲಿನ ಫಲ ತಿನ್ನುವುದಲ್ಲದೆ ಬೋರ್ ವೆಲ್ ಕೇಬಲ್ ಕಟ್ ಮಾಡುತ್ತಿದ್ದ ಇಲಿಯನ್ನು ಹಿಡಿದ ರೈತನೊಬ್ಬ ಭತ್ತ ತಿನ್ನುತ್ತೀಯಾ ತಿನ್ನು ಮೆಣಸಿನಕಾಯಿ ತಿನ್ನುತ್ತಿಯಾ ತಿನ್ನು ಹಾಳು ಯಾಕ್ ಮಾಡ್ತಿಯಾ ಎಂದು ಪ್ರಶ್ನೆ ಮಾಡಿ ಹಾಳು ಮಾಡಿದ್ರೇ ದುಡ್ಡು ನಿಮ್ಮಪ್ಪ ಕೊಡ್ತಾನ್ ಎಂದು ಕಡ್ಡಿಯಿಂದ ಹೊಡೆಯುವ ಸಂಭಾಷಣೆ ವಿಡಿಯೋ ಎಲ್ಲೆಡೆ ಸಖತ್ ವೈರಲ್ ಆಗಿದೆ.
ಈ ವಿಡಿಯೋ ಎಲ್ಲಿಯದು ಯಾರದ್ದು ಎಂಬ ಸೂಕ್ತ ಸ್ಥಳ ತಿಳಿದು ಬಂದಿಲ್ಲಾ, ಆದರೆ ರೈತ ಇಲಿಗೆ ಜಮೀನ್ ನಲ್ಲಿಯ ಏನು ಬೇಕಾದ್ರು ತಿನ್ನು ಕೇಬಲ್ ಕಡಿದು ಹಾಳು ಯಾಕ್ ಮಾಡ್ತಿಯಾ ? ಎಂಬ ಆತ್ಮೀಯ ಸಂಭಾಷಣೆ ಜೊತೆ ಈಗ ಪವರ್ ಇದೆ ಕೇಬಲ್ ಕಡಿ ಎಂಬ ಮಾತು ನಿಮ್ಮನ್ನು ನಗೆಗಡಲಲ್ಲಿ ತೇಲಿಸದೇ ಇರದು.
PublicNext
13/10/2021 09:20 am