ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಾರ್ವಜನಿಕ ಶೌಚಾಲಯಕ್ಕೆ ಹೋಗೋ ಮುನ್ನ ಹುಷಾರ್ : ವಿಡಿಯೋ ವೈರಲ್

ಪ್ರಕೃತಿ ಕರೆ ಬಂದಾಗ ಸಾರ್ವಜನಿಕ ಶೌಚಾಲಯಕ್ಕೆ ಹೋಗುವುದು ಸಾಮಾನ್ಯ ಆದ್ರೆ ವೈರಲ್ ಆದ ವಿಡಿಯೋ ನೋಡಿದ ಬಳಿಕ ತುಸು ಜಾಗೃಕತೆಯಿಂದ ಒಳ ಹೋಗಿ..

ಹೌದು ಹೆದ್ದಾರಿಯ ಬದಿಯಲ್ಲಿದ್ದ ತೆರೆದ ಮೈದಾನದ ಬಳಿಯ ಸಾರ್ವಜನಿಕ ಶೌಚಾಲಯದಲ್ಲಿ ಸಿಂಹವೊಂದು ಕಾಣಿಸಿಕೊಂಡಿದೆ. ಅದು ಹೇಗೆ ಒಳಗೆ ಹೋಗಿತ್ತೋ ಗೊತ್ತಿಲ್ಲ.. ಹೊರಗೆ ಬಂದು ನಿಂತಿರುವ ದೃಶ್ಯವು ಸೆರೆಯಾಗಿದೆ.

ಶೌಚಾಲಯದಿಂದ ಸಿಂಹ ನಿಧಾನವಾಗಿ ಬಾಗಿಲಿನಿಂದ ಹೊರಬಂದಿದೆ ಇನ್ನೊಂದು ತುದಿಯಲ್ಲಿರುವ ಜನರನ್ನು ದಿಟ್ಟಿಸಿ ನೋಡುತ್ತಾ ನಿಧಾನವಾಗಿ ಅಲ್ಲಿಂದ ಪೊದೆಗಳೊಳಗೆ ತೆರಳಿದೆ.

ವೈಲ್ಡ್ ಲೆನ್ಸ್ ಇಕೋ ಫೌಂಡೇಶನ್ ಈ ವಿಡಿಯೋವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡು "ಶೌಚಾಲಯ ಯಾವಾಗಲೂ ಸುರಕ್ಷಿತವಲ್ಲ, ಕೆಲವೊಮ್ಮೆ ಇದನ್ನು ಇತರರೂ ಬಳಸಬಹುದು" ಎಂದು ಶೀರ್ಷಿಕೆ ನೀಡಿದೆ.

Edited By : Nagesh Gaonkar
PublicNext

PublicNext

04/10/2021 07:24 pm

Cinque Terre

67.19 K

Cinque Terre

1

ಸಂಬಂಧಿತ ಸುದ್ದಿ