ನವದೆಹಲಿ: ಏರ್ ಇಂಡಿಯಾ ವಿಮಾನವೊಂದು ಫ್ಲೈಓವರ್ ಕೆಳಗೆ ಸಿಲುಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ಘಟನೆಯು ದೆಹಲಿ- ಗುರಗಾಂವ್ ಹೆದ್ದಾರಿಯಲ್ಲಿರುವ ಐಜಿಐ ವಿಮಾನ ನಿಲ್ದಾಣದ ಬಳಿ ನಡೆದಿದೆ ಎನ್ನಲಾಗಿದೆ. ವೈರಲ್ ಆಗಿರುವ ವಿಡಿಯೋದಲ್ಲಿ ಏರ್ ಇಂಡಿಯಾ ವಿಮಾನವು ರಸ್ತೆಯ ಒಂದು ಬದಿಯಲ್ಲಿ ಸಿಲುಕೊಂಡಿದ್ದರೆ, ಇನ್ನೊಂದು ರಸ್ತೆಯಲ್ಲಿ ವಾಹನಗಳು ಸಂಚರಿಸುತ್ತಿರುವುದನ್ನು ಕಾಣಬಹುದಾಗಿದೆ.
ವೈರಲ್ ವಿಡಿಯೋಗೆ ಸ್ಪಷ್ಟನೆ ನೀಡಿರುವ ಏರ್ ಇಂಡಿಯಾ, "ಈ ವಿಮಾನಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ. ಸಂಸ್ಥೆಯಿಂದ ಖರೀದಿಸಿದ ಮಾಲೀಕರಿಂದ ವಿಮಾನವನ್ನು ಸಾಗಿಸಲಾಗುತ್ತಿದೆ" ಎಂದು ತಿಳಿಸಿದೆ. ಹೀಗಿದ್ದರೂ ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ಏರ್ ಇಂಡಿಯಾ ವಿರುದ್ಧ ಗೇಲಿ ಮಾಡುತ್ತಿದ್ದಾರೆ.
PublicNext
04/10/2021 03:28 pm