ಇತ್ತೀಚೆಗೆ ಮನುಷ್ಯರ ಜಾಗಕ್ಕೆ ಪ್ರಾಣಿಗಳು ಬರುವ ಘಟನೆಗಳು ನಡೆಯುತ್ತಿವೆ. ಮಾನವ ಮತ್ತು ವನ್ಯಜೀವಿ ಸಂಘರ್ಷಗಳೂ ನಡೆಯುತ್ತಿವೆ.
ಇಂತದ್ದೇ ಮತ್ತೊಂದು ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಅಲ್ಲಿನ ಕೊಟಗಿರಿ-ಇರೋಡ್ ಮಾರ್ಗದಲ್ಲಿ ಆನೆಯೊಂದು ಬಸ್ಗೆ ಅಡ್ಡವಾಗಿ ಬಂದಿದೆ. ಬೆಚ್ಚಿದ ಚಾಲಕ ಬಸ್ ರಿವರ್ಸ್ ತೆಗೆದುಕೊಳ್ಳಲು ಯತ್ನಿಸಿದ್ದಾನೆ. ಆದ್ರೆ ಅದು ತಿರುವಿನ ರಸ್ತೆಯಾದ್ದರಿಂದ ರಿವರ್ಸ್ ಚಲಿಸಲು ಸಾಧ್ಯವಾಗಿಲ್ಲ. ಹೀಗಾಗಿ ಅಸಹಾಯಕನಾದ ಚಾಲಕ ತನ್ನ ಸೀಟ್ ನಿಂದ ಈ ಕಡೆ ಬಂದು ನಿಂತಿದ್ದಾನೆ. ನಂತರ ಕೆಲ ನಿಮಿಷಗಳಲ್ಲಿ ಆನೆ ಶಾಂತವಾಗಿದೆ. ಈ ವಿಡಿಯೋ ನೋಡಿದ ಹಲವರು ವನ್ಯಜೀವಿಗಳ ಜಾಗವನ್ನ ಮನುಷ್ಯ ಹಾಳು ಮಾಡಿದಂತೆಲ್ಲ ಇಂತಹ ಘಟನೆಗಳು ಮರುಕಳಿಸುತ್ತವೆ ಎನ್ನುತ್ತಿದ್ದಾರೆ.
PublicNext
25/09/2021 09:41 pm