ಭೋಪಾಲ್: ವಯಸ್ಸು 90 ಆದರೂಕಲಿಕೆಗೆ ಯಾವುದೇ ವಯಸ್ಸಿನ ಹಂಗಿಲ್ಲ ಎಂಬ ಮಾತಿಗೆ ಮಧ್ಯ ಪ್ರದೇಶದ ದೇವಾಸ್ ಜಿಲ್ಲೆಯ 90 ವರ್ಷದ ವೃದ್ಧೆ ಬೆಸ್ಟ್ ಉದಾಹರಣೆ.
ಈ ವೃದ್ಧೆ ಕಾರು ಓಡಿಸುವ ಕ್ರೇಜ್ ಗೆ ಯುವಕರೇ ಫಿದಾ ಆಗಿದ್ದಾರೆ. ಈ ಕುರಿತ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಅಜ್ಜಿ ಹೆಸರು ರೇಷಮ್ ಬಾಯ್ ತನ್ವರ್. ಇವರು ದೇವಾಸ್ ಜಿಲ್ಲೆಯ ಬಿಲವಾಲಿ ಪ್ರದೇಶದ ನಿವಾಸಿ. ಅವರ ಇಡೀ ಕುಟುಂಬ ಚಾಲನಾ ಕೌಶಲ್ಯ ಹೊಂದಿರುವುದರಿಂದ ವೃದ್ಧೆಯು ಕೂಡ 90ನೇ ವಯಸ್ಸಿನಲ್ಲಿ ಕಾರು ಓಡಿಸುವುದನ್ನು ಕಲಿತು ಅಚ್ಚರಿ ಮೂಡಿಸಿದ್ದಾರೆ.
ಇಳಿ ವಯಸ್ಸಿನಲ್ಲಿ ಅಜ್ಜಿಯ ಕಲಿಕಾ ಹುಮ್ಮಸ್ಸಿಗೆ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಫಿದಾ ಆಗಿದ್ದು, ಟ್ವೀಟ್ ಮೂಲಕ ಅಭಿನಂದಿಸಿದ್ದಾರೆ.
PublicNext
24/09/2021 05:07 pm