ಶಾಲಾ ದಿನಗಳಲ್ಲಿ ಆಟ ಆಡುವ ವೇಳೆ ಕೆಲವರು ತಮ್ಮ ಸಹಪಾಠಿಗಳೊಂದಿಗೆ ಜಗಳ ಮಾಡಿಕೊಂಡಿರುತ್ತಾರೆ.
ಆಗ ಜಗಳ ಮಾಡಿಕೊಂಡ ಮಕ್ಕಳು ಸ್ವಲ್ಪ ಹೊತ್ತಿನ ಬಳಿಕ ಎಲ್ಲಾ ಮರೆತು ಜತೆಯಾಗಿ ಆಡುತ್ತಾರೆ. ಬಾಲ್ಯದ ಈ ಜಗಳಗಳು ಸುಂದರ ನೆನಪುಗಳಲ್ಲಿ ಒಂದಾಗಿವೆ.
ಸದ್ಯ ವೈರಲ್ ಆಗಿರುವ ವಿಡಿಯೋದಲ್ಲಿಯ ವೃದ್ದರ ಜಗಳ ನೋಡಿದ್ರೆ ನಿಮ್ಗೆ ಬಾಲ್ಯದ ನೆನಪು ಬರಬಹುದು.. ಜತೆಗೆ ನಗುವುಕ್ಕುವುದಕ್ಕೂ ಕಾರಣವಾಗುತ್ತದೆ.
ಐಪಿಎಸ್ ಅಧಿಕಾರಿ ರುಪಿನ್ ಶರ್ಮಾ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿರುವ ದೃಶ್ಯದಲ್ಲಿ ವೃದ್ಧರಿಬ್ಬರು ಮುಖಾಮುಖಿಯಾಗುವ ದೃಶ್ಯ ಕಾಣಬಹುದು.
ಇಬ್ಬರ ಜಗಳದಲ್ಲಿ ಇನ್ನೊಬ್ಬರು ವೃದ್ಧರ ಎಂಟ್ರಿಯಾಗುತ್ತದೆ. ಈ ವ್ಯಕ್ತಿ ಬಿದ್ದ ವೃದ್ಧರನ್ನು ಹಿಡಿಯುತ್ತಾರೆ. ನಂತರ ನಡೆಯುವ ನೂಕಾಟ, ತಳ್ಳಾಟದಲ್ಲಿ ಮೂವರು ಒಮ್ಮೊಮ್ಮೆ ನೆಲಕ್ಕೆ ಬೀಳುತ್ತಾರೆ. ಇಬ್ಬರ ಜಗಳದಲ್ಲಿ ಎಂಟ್ರಿ ಕೊಟ್ಟ ಮೂರನೆಯವರು ಜಗಳ ಬಿಡಿಸಲು ಬಂದವರಾ ಅಥವಾ ಇವರು ಕೂಡಾ ಹೊಡೆದಾಟದ ಭಾಗವಾ ಸ್ಪಷ್ಟವಾಗಿಲ್ಲ. ಈ ತಮಾಷೆಯ ಹೊಡೆದಾಟದ ವಿಡಿಯೋ ಇಲ್ಲಿದೆ ನೋಡಿ
PublicNext
14/09/2021 03:24 pm