ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಇಡೀ ಬಾಳೆ ತೋಟವನ್ನೇ ನಾಶಪಡೆಸಿದ್ರೂ ಹಕ್ಕಿ ಗೂಡಿರುವ ಗಿಡವನ್ನು ಮುಟ್ಟದೇ ತೆರಳಿದ ಆನೆಗಳು.!

ಚೆನ್ನೈ: ಆನೆಗಳು ತೋಟದಲ್ಲಿ ಹಕ್ಕಿ ಗೂಡಿದ್ದ ಕೇವಲ ಒಂದು ಬಾಳೆ ಗಿಡ ಬಿಟ್ಟು ಉಳಿದೆಲ್ಲವನ್ನೂ ನಾಶಪಡಿಸಿದ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪ್ರಾಣಿಗಳಲ್ಲಿರುವ ಕಾಳಜಿ, ಪ್ರೀತಿ ಬಗ್ಗೆ ನೆಟ್ಟಿಗರು ಫಿದಾ ಆಗಿದ್ದಾರೆ.

ಹೌದು. ತಮಿಳುನಾಡಿನ ಇರೋಡ್ ಜಿಲ್ಲೆಯ ಸತ್ಯಮಂಗಳ ಎಂಬಲ್ಲಿ ಈ ಘಟನೆ ನಡೆದಿದೆ. ಇಲ್ಲಿನ ವಿಲ್ಮುಂಡಿ ಕಾಡಿನಿಂದ ಐದು ಕಾಡಾನೆಗಳು ನಾಡಿನತ್ತ ಹೆಜ್ಜೆ ಹಾಕಿ ಕೃಷ್ಣಸ್ವಾಮಿ ಎಂಬವರು ಬೆಳೆಸಿದ್ದ ಬಾಳೆ ತೋಟವನ್ನು ಧ್ವಂಸಗೊಳಿಸಿವೆ. ಅಚ್ಚರಿ ಎಂಬಂತೆ ಇಷ್ಟೆಲ್ಲಾ ಹಾನಿಯುಂಟು ಮಾಡಿದ ಆನೆಗಳ ಗುಂಪು ಹಕ್ಕಿ ಗೂಡಿದ್ದ ಒಂದು ಬಾಳೆ ಗಿಡಕ್ಕೆ ಕಿಂಚಿತ್ತೂ ತಾಗದಂತೆ ತೆರಳಿವೆ.

ಈ ಸಂಬಂಧ ಐಎಫ್‌ಎಸ್‌ ಅಧಿಕಾರಿ ಸುಶಾಂತ್ ನಂದಾ ವಿಡಿಯೋವನ್ನು ಟ್ವೀಟ್ ಮಾಡಿದ್ದಾರೆ. ಜೊತೆಗೆ, "ಇದೇ ಕಾರಣಕ್ಕೆ ಆನೆಗಳನ್ನು ಸೌಮ್ಯ ಪ್ರಾಣಿಗಳೆನ್ನುವುದು. ಹಕ್ಕಿ ಗೂಡಿದ್ದ ಗಿಡವನ್ನು ಬಿಟ್ಟು ಉಳಿದೆಲ್ಲವನ್ನೂ ನಾಶಪಡಿಸಿದೆ. ಇದುವೇ ನೋಡಿ ದೇವರು ಸೃಷ್ಟಿಸಿದ ಅದ್ಭುತ ಪ್ರಕೃತಿ" ಎಂದು ಬರೆದುಕೊಂಡಿದ್ದಾರೆ.

Edited By : Manjunath H D
PublicNext

PublicNext

12/09/2021 11:19 am

Cinque Terre

73.39 K

Cinque Terre

0

ಸಂಬಂಧಿತ ಸುದ್ದಿ