ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಚ್ಚು ಸಾಹಸ ಕುತ್ತು ತಂದಿತು ಜೋಕೆ : ವಿಡಿಯೋ ವೈರಲ್

ಕೆಲವೊಂದು ಸಂದರ್ಭಗಳಲ್ಲಿ ಯುವಕರು ಟ್ರೈ ಮಾಡುವ ಹುಚ್ಚುಸಾಹಸಗಳು ಜೀವಕ್ಕೆ ಕಂಟಕವಾಗುತ್ತವೆ ಎನ್ನುವುದಕ್ಕೆ ಈ ವೈರಲ್ ವಿಡಿಯೋ ಸಾಕ್ಷಿಯಾಗಿದೆ.

ಕೆಲವು ಯುವಕರು ಯಾವುದೇ ಸುರಕ್ಷತೆಯನ್ನು ಅನುಸರಿಸದೆ ಇವರು ತಮ್ಮ ಕೌಶಲ್ಯ ಪ್ರದರ್ಶಿಸಲು ಹೋಗಿ ಅಪಾಯವನ್ನು ಮೈಮೇಲೆ ಎಳೆದುಕೊಳ್ಳುತ್ತಾರೆ.

ಸದ್ಯ ಬೆಂಕಿಯಲ್ಲಿ ಸರಸವಾಡಲು ಹೋಗಿ ವ್ಯಕ್ತಿಯೊಬ್ಬರು ಅಪಾಯಕಾರಿ ಸನ್ನಿವೇಶ ಎದುರಿಸಿದ್ದಾರೆ. ಬೆಂಕಿಯ ಜ್ವಾಲೆಯನ್ನುಂಟು ಮಾಡಲು ವ್ಯಕ್ತಿಯೊಬ್ಬರು ಯತ್ನಿಸುತ್ತಾರೆ. ಇದೇ ಜ್ವಾಲೆ ಇವರ ಮೈಗೂ ಹತ್ತಿಕೊಳ್ಳುತ್ತದೆ. ಬಟ್ಟೆ ಕೂಡಾ ಸುಟ್ಟು ಹೋಗುತ್ತವೆ. ಈ ವೇಳೆ, ಅಲ್ಲೇ ಇದ್ದವರು ತಕ್ಷಣ ಇವರ ನೆರವಿಗೆ ಧಾವಿಸುವುದನ್ನೂ ಈ ದೃಶ್ಯದಲ್ಲಿ ನೋಡಬಹುದಾಗಿದೆ.

ಈ ದೃಶ್ಯ ಎಲ್ಲಿನದ್ದು, ಯಾವಾಗ ಸೆರೆಯಾಗಿದ್ದು ಎಂದು ಗೊತ್ತಾಗಿಲ್ಲ. ಆದರೆ, ಇದು ಎಲ್ಲರಿಗೂ ಒಂದು ಪಾಠವಾಗಿದೆ.

Edited By : Nagesh Gaonkar
PublicNext

PublicNext

04/09/2021 05:57 pm

Cinque Terre

64.71 K

Cinque Terre

1

ಸಂಬಂಧಿತ ಸುದ್ದಿ