ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಾಮರಸ್ಯದ ಬದುಕು ಇದಲ್ಲವೆ.?

ಮಾನವನು ಪ್ರಾಣಿಗಳಿಂದ ಕಲಿಯುವುದು ತುಂಬಾ ಇದೆ. ಪರಸ್ಪರ ದ್ವೇಷ, ಅಸೂಯೆಗಳಿಂದ ಶಾಂತಿ, ನೆಮ್ಮದಿ ಕಳೆದುಕೊಂಡಿರುವ ಮನುಷ್ಯನಿಗೆ ಕೆಲವು ಬಾರಿ ಪ್ರಾಣಿಗಳು ಸಾಮರಸ್ಯದ ಪಾಠ ಹೇಳುತ್ತವೆ. ಇಂತಹದ್ದೇ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಕೀನ್ಯಾದಲ್ಲಿರುವ ಪ್ರಾಣಿಗಳ ರಕ್ಷಣೆ ಮಾಡುವ ಸಂಘಟನೆ ಶೆಲ್ಡ್ರಿಕ್ ವೈಲ್ಡ್​ಲೈಫ್, ಈ ವಿಡಿಯೋವನ್ನು ಹಂಚಿಕೊಂಡಿದೆ. ಆಫ್ರಿಕನ್ ಆನೆಯೊಂದು ಕಾಡುಕೋಣದ ಜೊತೆಗೆ ಆಟವಾಡುವ ದೃಶ್ಯ ಮನೋಹರವಾಗಿದ್ದು, ಜನರ ಮನಸ್ಸು ಗೆದ್ದಿದೆ.

'ಈ ವಿಡಿಯೋದಲ್ಲಿರುವ ಇವಿಯಾ ಹೆಸರಿನ ಕಾಡುಕೋಣ ಹಾಗು ನೊಟ್ಟೋ ಎಂಬ ಆನೆ ಎರಡೂ ಕೂಡ ಅನಾಥ ಪ್ರಾಣಿಗಳು. ಅವುಗಳನ್ನು ನಾವು ಸಾಕಿಕೊಂಡಿದ್ದೆವು. ಎರಡು ವಿಭಿನ್ನ ಪ್ರಭೇದದ ಜೀವಿಗಳು ಸಾಮಾನ್ಯವಾಗಿ ಬೇರೆ ಬೇರೆಯಾಗಿಯೇ ಬಾಳುತ್ತವೆ. ಆದರೆ ಅವುಗಳು ಪರಸ್ಪರ ಸ್ನೇಹದಿಂದ ಇರುವುದು ಅಚ್ಚರಿ ಮೂಡಿಸಿದೆ' ಎಂದು ಶೆಲ್ಡ್ರಿಕ್ ವೈಲ್ಡ್​ಲೈಫ್ ಟ್ವೀಟ್ ಮಾಡಿದೆ.

Edited By : Nagesh Gaonkar
PublicNext

PublicNext

02/09/2021 09:25 pm

Cinque Terre

138.97 K

Cinque Terre

0

ಸಂಬಂಧಿತ ಸುದ್ದಿ