ಇತ್ತೀಚಿನ ದಿನಗಳಲ್ಲಿ ಫೋಟೋ, ವಿಡಿಯೋ ಶೂಟ್‌ಗೆ ಡ್ರೋನ್ ಬಳಕೆ ಹೆಚ್ಚಾಗುತ್ತಿದೆ. ಹೀಗೆ ಅಲಿಗೇಟರ್ ಮೊಸಳೆಯ ವಿಡಿಯೋ ಮಾಡಲು ಹೋಗಿ ಭಾರೀ ಎಡವಟ್ಟು ಸಂಭವಿಸಿದ್ದು, ಭಯಾನಕ ವಿಡಿಯೋ ವೈರಲ್ ಆಗಿದೆ.
ಫ್ಲೋರಿಡಾದಲ್ಲಿ ಈ ಘಟನೆ ನಡೆದಿದೆ. ಡ್ರೋನ್ ಸೆನ್ಸರ್ ಮೂಲಕ ಮೊಸಳೆಯ ಕ್ಲೋಸ್ ಅಪ್ ಶಾಟ್ ಪಡೆಯಲು ಆಪರೇಟರ್ ಮುಂದಾಗಿದ್ದರು. ಈ ವೇಳೆ ಡ್ರೋನ್‌ಅನ್ನು ಯಾವುದೋ ಕೀಟವೆಂದು ಭಾವಿಸಿದ ಮೊಸಳೆ ಏಕಾಏಕಿ ದಾಳಿ ಮಾಡಿದೆ. ಬಾಯಿಯಲ್ಲಿ ಡ್ರೋನ್ ಹಿಡಿದು ಅಗಿದಿದೆ. ಇದರ ಪರಿಣಾಮ ಡ್ರೋನ್ ಒಡೆದು ಹೊಗೆ ಬರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.
ಕ್ಯಾಲಿಫೋರ್ನಿಯಾದ ಡ್ರೋನ್ ಕಂಪನಿಯಾದ 3ಆರ್ಡಿ ಸಂಸ್ಥಾಪಕ ಮತ್ತು ಮಾಜಿ ಸಿಇಒ ಕ್ರಿಸ್ ಆಂಡರ್ಸನ್ ಇಂದು ಬೆಳಿಗ್ಗೆ ವಿಡಿಯೋವನ್ನು ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋವನ್ನು ಗೂಗಲ್ ಸಿಇಒ ಸುಂದರ್ ಪಿಚೈ ಸೇರಿದಂತೆ ಅನೇಕರು ರೀಟ್ವೀಟ್ ಮಾಡಿದ್ದಾರೆ. ಜತೆಗೆ ನೆಟ್ಟಿಗರು ತಮ್ಮ ಅಭಿಪ್ರಾಯಗಳನ್ನು ತಿಳಿಸಿದ್ದಾರೆ.
PublicNext
01/09/2021 05:38 pm