ಇಡೀ ದಿನ ಬಿಡದೆ ಕೆಲಸ ಮಾಡಿ ಮನಸ್ಸು ದಣಿದಿದ್ದಾಗ ಪ್ರಾಣಿಗಳ ಮುದ್ದಾದ ದೃಶ್ಯ ಮನಸ್ಸಿನಲ್ಲಿ ಉಲ್ಲಾಸ ಮನೆ ಮಾಡುತ್ತದೆ. ಸದ್ಯ ಅಂತಹದ್ದೇ ದೃಶ್ಯವೊಂದು ಈಗ ನೆಟ್ಟಿಗರ ಹೃದಯಕ್ಕೆ ಲಗ್ಗೆ ಇಟ್ಟಿದೆ.
ಇದು ಮುದ್ದಾದ ಕೋಲಾ ಕರಡಿಗಳು ಮಕ್ಕಳಂತೆ ಪ್ರೀತಿ ತೋರುವ ಹೃದಯಸ್ಪರ್ಶಿ ದೃಶ್ಯ. ಮತ್ತೆ ಮತ್ತೆ ನೋಡಬೇಕೆನಿಸುವ ಈ ದೃಶ್ಯಕ್ಕೆ ಪ್ರಾಣಿ ಪ್ರಿಯರು ಪಿದಾ ಆಗಿದ್ದಾರೆ.
ಆಸ್ಟ್ರೇಲಿಯಾದ ಸಿಂಬಿಯೊ ವೈಲ್ಡ್ ಲೈಫ್ ಪಾರ್ಕ್ ತನ್ನ ಫೇಸ್ ಬುಕ್ ಖಾತೆಯಲ್ಲಿ ಇಂತಹದ್ದೊಂದು ಸುಂದರ ವಿಡಿಯೋವನ್ನು ಅಪ್ಲೋಡ್ ಮಾಡಿದೆ. ಈ ಕ್ಲಿಪ್ ನಲ್ಲಿ ಪ್ರಾಣಿ ಪಾಲಕಿಯೊಬ್ಬರು ಕೋಲಾ ಕರಡಿಗಳನ್ನು ಮುದ್ದಿಸುವ ದೃಶ್ಯವಿದೆ.
ನೀವು ಕೂಡಾ ಈ ಮುದ್ದಾದ ಕೋಲಾಗಳ ನಿರ್ಮಲ ಪ್ರೀತಿಗೆ ಮನಸೋಲುವುದು ಗ್ಯಾರಂಟಿ..
PublicNext
15/08/2021 10:07 pm