ಮಕ್ಕಳನ್ನು ಸಂಕಷ್ಟದಿಂದ ಪಾರು ಮಾಡಲು ತಾವು ಯಾವುದೇ ಅಪಾಯಕಾರಿ ಸನ್ನಿವೇಶವನ್ನೂ ಎದುರಿಸಲು ಅಮ್ಮ ಸಿದ್ಧ ಇರುತ್ತಾರೆ. ಪ್ರತಿಯೊಂದು ಜೀವ ರಾಶಿಯಲ್ಲೂ ಅಮ್ಮನ ಪ್ರೀತಿಯಲ್ಲಿ ವ್ಯತ್ಯಾಸ ಇರದು. ಅಂತಹದ್ದೇ ಹೃದಯಸ್ಪರ್ಶಿ ತಾಯಿ ಮಮತೆಯ ವಿಡಿಯೋವೊಂದು ನೆಟ್ಟಿಗರ ಮನ ಗೆದ್ದಿದೆ.
ಹೊಂಚು ಹಾಕಿ ನಿಖರವಾಗಿ ಬೇಟೆಯಾಡುವುದು ಚಿರತೆಗಳಿಗೆ ಕರಗತ. ಚಿರತೆಯ ಬಾಯಿಯಿಂದ ಬೇಟೆ ತಪ್ಪಿಸಿಕೊಳ್ಳುವುದು ಬಲು ಅಪರೂಪ. ಆದರೆ, ತಾಯಿ ಪ್ರೀತಿಯ ಎದುರು ಚಿರತೆ ಕೂಡಾ ಸೋಲಲೇಬೇಕು. ಎನ್ನುವುದಕ್ಕೆ ಸಾಕ್ಷಿ ಈ ದೃಶ್ಯ.
ಹೌದು ಕಾಡುಹಂದಿಯ ಮರಿಯೊಂದನ್ನು ಚಿರತೆ ಬೆನ್ನಟ್ಟಿಕೊಂಡು ಬಂದು ಕೊಲ್ಲಲು ಯತ್ನಿಸುವ ವೇಳೆ ಎಂಟ್ರಿ ಕೊಟ್ಟ ತಾಯಿ ಕಾಡುಹಂದಿಯನ್ನು ಕಂಡ ಚಿರತೆಗೆ ದಿಗಿಲುಂಟಾಗಿ ಓಡುವುದಕ್ಕೆ ಶುರು ಮಾಡಿದೆ. ಚಿರತೆಯನ್ನು ಬೆನ್ನಟ್ಟಿಕೊಂಡು ತಾಯಿ ಕಾಡುಹಂದಿ ಬಹುದೂರ ಓಡಿತ್ತು..
ಈ ಮೂಲಕ ಈ ತಾಯಿ ತನ್ನ ಮರಿಯನ್ನು ರಕ್ಷಿಸಿಕೊಂಡಿದೆ.
PublicNext
10/08/2021 03:52 pm