ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನೋಡನೋಡುತ್ತಿದ್ದಂತೆ ಸರೋವರದಲ್ಲಿ ಮುಳುಗಿದ ಕಾರು- ತಪ್ಪಿದ ಅನಾಹುತ.!

ಚಿಕಾಗೋ: ಕಾರ್‌ವೊಂದು ನೋಡನೋಡುತ್ತಿದ್ದಂತೆ ಸರೋವರದಲ್ಲಿ ಮುಳುಗಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಚಿಕಾಗೋದ ಇಲಿನಾಯ್ಸ್‌ನ ಸ್ಟ್ರಿಂಗ್ ಫೀಲ್ಡ್ ಪಟ್ಟಣದ ಸಮೀಪದಲ್ಲಿ ಈ ಘಟನೆ ನಡೆದಿದೆ. ಸಂಗಮನ್ ಕೌಂಟಿಯಲ್ಲಿರುವ ಸ್ಪೌಲ್ಡಿಂಗ್ ಡ್ಯಾಮ್‌ನಲ್ಲಿನ ಯೋಜನೆಗೆ ಸಂಬಂಧಿಸಿದ ವಿಚಾರವನ್ನು ವರದಿಗಾರರೊಬ್ಬರು ಲೈವ್ ಸುದ್ದಿ ಪ್ರಸಾರ ಮಾಡುತ್ತಿದ್ದರು. ಈ ವೇಳೆ ಬಿಳಿ ಬಣ್ಣದ ಕಾರ್ ನಿಧಾನವಾಗಿ ಹಿಂದಕ್ಕೆ ಚಲಿಸಿ ಸರೋವರದಲ್ಲಿ ಮುಳುಗಿದೆ. ಅದೃಷ್ಟವಶಾತ್ ಅದರಲ್ಲಿ ಯಾರೂ ಇರಲಿಲ್ಲ.

ಸಂಗಮನ್ ಕೌಂಟಿಯ ರಕ್ಷಣಾ ಪಡೆಯು ಕಾರನ್ನು ಮೇಲೆತ್ತುವಲ್ಲಿ ಯಶಸ್ವಿಯಾಗಿದ್ದಾರೆ. ಕಾರು ಸರೋವರಕ್ಕೆ ಬಿದ್ದು, ಮುಳುಗಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ನೆಟ್ಟಿಗರು ತಮ್ಮದೆ ರೀತಿಯಲ್ಲಿ ಪ್ರತಿಕ್ರಿಯಿಸಿ ನಗೆ ಚಟಾಕಿ ಸಿಡಿಸಿದ್ದಾರೆ.

Edited By : Manjunath H D
PublicNext

PublicNext

06/08/2021 12:40 pm

Cinque Terre

50.06 K

Cinque Terre

0

ಸಂಬಂಧಿತ ಸುದ್ದಿ