ದಾವಣಗೆ: ಬೆಂಗಳೂರಿನ ಜೆ. ಸಿ. ನಗರದಲ್ಲಿ ಪುಂಡಾಟಿಕೆ ನಡೆಸಿದ್ದ ಆಫ್ರಿಕನ್ ಪ್ರಜೆಗಳ ವಿರುದ್ಧ ದಾವಣಗೆರೆ ಪುಟ್ಟ ಬಾಲಕನೊಬ್ಬ ಉಗ್ರಾವತಾರ ತಾಳಿದ ವಿಡಿಯೋ ಸಖತ್ ವೈರಲ್ ಆಗ್ತಿದೆ.
ತಾಲೂಕಿನ ಕುಕ್ಕುವಾಡ ಗ್ರಾಮದ ಉಗ್ರಂ ಎಂಬ ನಾಲ್ಕು ವರ್ಷದ ಬಾಲಕ ಹಸಿರು ಟವೆಲ್ ಹೊತ್ತು ಆಕ್ರೋಶ ವ್ಯಕ್ತಪಡಿಸಿದ್ದಾನೆ.
"ಏಯ್ ಆಫ್ರಿಕನ್ ನಾಯಿಗಳ ದಬ್ಬಾಳಿಕೆ ಮಾಡ್ತೀರಾ. ಕರ್ನಾಟಕಕ್ಕೆ ಬಂದು ಇಲ್ಲಿನ ರೊಟ್ಟಿ ತಿಂದು ನೀರು ಕುಡಿದು ಪುಂಡಾಟಿಕೆ ಮಾಡ್ತೀರಾ. ಕರ್ನಾಟಕ ಪೊಲೀಸರಿಗೆ ಲಾಠಿ ತೋರಿಸ್ತೀರಾ. ಕಾನೂನು ಅಂದ್ರೆ ಏನ್ ತಿಳ್ಕೊಂಡಿದ್ದೀರಾ..? ಪೊಲೀಸರೇನೂ ಬಳೆ ತೊಟ್ಟಿಕೊಂಡಿದ್ದಾರಾ...? ಲೇ, ಆಫ್ರಿಕನ್ ನಾಯಿಗಳ ನಿಮಗೆ ಇಲ್ಲಿರೋ ಅವಕಾಶ ಇಲ್ಲ, ಇಲ್ಲಿಂದ ನಡೆಯಿರಿ. ಪೊಲೀಸರ ಮೇಲೆ ಕೈ ಮಾಡ್ತೀಯಾ ನಾಯಿ, ನಾನು ಪೊಲೀಸರ ಪರ ಇದ್ದೇನೆ'' ಎಂದು ಹೇಳುವ ವಿಡಿಯೋ ಎಲ್ಲರ ಗಮನ ಸೆಳೆಯುತ್ತಿದೆ.
PublicNext
03/08/2021 05:55 pm