ಒರಾಂಗುಟನ್ ಸನ್ ಗ್ಲಾಸ್ ಹಾಕಿಕೊಂಡಿರುವ ಮುದ್ದು ಮುದ್ದಾಗಿ ಪೋಸ್ ಕೊಟ್ಟಿರುವ ವಿಡಿಯೋ ನೆಟ್ಟಿಗರ ಹೃದಯ ಗೆದ್ದಿದೆ.
ಒರಾಂಗುಟನ್ ಗಳು ಅತ್ಯಂತ ಬುದ್ಧಿವಂತ ಪ್ರಾಣಿಗಳು. ಕೆಲವೊಂದು ಸಂದರ್ಭದಲ್ಲಿ ಮನುಷ್ಯರಂತೆಯೇ ಕೆಲವೊಂದು ವಸ್ತುಗಳನ್ನು ಬಳಸುವ ಸಾಮರ್ಥ್ಯವನ್ನೂ ಇವುಗಳು ಹೊಂದಿರುತ್ತವೆ. ಇವುಗಳು ಮನುಷ್ಯರಿಗೆ ತುಂಬಾ ಹತ್ತಿರವಾಗಿವೆ ಎಂಬುದು ಅನೇಕ ಅಧ್ಯಯನಗಳಿಂದಲೂ ದೃಢಪಟ್ಟಿವೆ.
ಇಂಡೋನೇಷ್ಯಾದ ಮೃಗಾಲಯಕ್ಕೆ ಬಂದಿದ್ದ ಸಂದರ್ಶಕರಿಂದ ಕೆಳಗೆ ಬಿದ್ದಿದ್ದ ಸನ್ ಗ್ಲಾಸ್ ಎತ್ತಿಕೊಂಡ ಒರಾಂಗುಟನ್ ಅದನ್ನು ಧರಿಸಿ ಆನಂದಿಸಿದೆ. ಈ ದೃಶ್ಯ ಬಾರಿ ವೈರಲ್ ಆಗುತ್ತಿದೆ.
PublicNext
03/08/2021 04:37 pm