ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಓ ಮಯ್ ಗಾಡ್ : ಒಲಿಂಪಿಕ್ಸ್ ನಲ್ಲಿ ಪ್ರೇಮ ನಿವೇದನೆ, ವಿಡಿಯೋ ವೈರಲ್

ಬೆಂಗಳೂರು: ಸದ್ಯ ಜಪಾನ್ ನಲ್ಲಿ ನಡೆಯುತ್ತಿರುವ ಟೋಕಿಯೊ ಒಲಿಂಪಿಕ್ಸ್ ನಲ್ಲಿ ಆಟಗಾರರ ವಿಜಯದ್ದೇ ಸುದ್ದಿ.ಇದರ ಮಧ್ಯೆ ಸಣ್ಣ ಸೈಕಲ್ ಗ್ಯಾಪ್ ನಲ್ಲಿ ಕೆಲವು ಅವಿಸ್ಮರಣಿಯ ಘಟನೆಗಳು ನಡೆದಿವೆ.

ಸೆಮಿಪೈನಲ್ ನಲ್ಲಿ ಪದಕ ವಂಚಿತರಾದ ಪೆನ್ಸರ್ ಕ್ರೀಡೆಯ ಕ್ರೀಡಾಪಟು ಅರ್ಜೆಂಟೈನಾದ ಮರಿಯಾ ಬೆಲೆನ್ ಅವರು ಪತ್ರಿಕಾಗೋಷ್ಟಿಯಲ್ಲಿದ್ದಾಗ ಅವರ ಕೋಚ್ ಲುಕಾಸ್ ಗುಲ್ಲೆರ್ಮೊ ಅವರು ಮಾಡಿದ ಪ್ರೇಮ ನಿವೇದನೆಯನ್ನು ಒಪ್ಪಿಕೊಂಡು ಮರಿಯಾ ಆನಂದಭಾಷ್ಪ ಸುರಿಸಿದ್ದಾರೆ.

ಈ ವಿಡಿಯೋ ವೈರಲ್ ಆಗುತ್ತಿದೆ. ವಿಶೇಷವೆಂದರೆ ಕಳೆದ 11 ವರ್ಷದ ಹಿಂದೆ ಪೆನ್ಸಿಂಗ್ ಅಂತಾರಾಷ್ಟ್ರೀಯ ಚಾಂಪಿಯನ್ ಶಿಫ್ ಇದ್ದಾಗಲೂ ಗುಲ್ಲೆರ್ಮೊ ಅವರು ತಮ್ಮ ಪ್ರೇಮ ನಿವೇದನೆ ಮಾಡಿಕೊಂಡಿದ್ದರು. ಆದರೆ, ಅಂದು ಮರಿಯಾ ಅದನ್ನು ನಯವಾಗಿಯೇ ನಿರಾಕರಿಸಿದ್ದರು.

Edited By : Manjunath H D
PublicNext

PublicNext

29/07/2021 09:53 am

Cinque Terre

43.47 K

Cinque Terre

0

ಸಂಬಂಧಿತ ಸುದ್ದಿ