ಆಕರ್ಷಕ ಮೈಮಾಟದ ಮಾಡೆಲ್ ಗಳು ವೇದಿಕೆ ಮೇಲೆ ಮಾರ್ಜಾಲ ಹೆಜ್ಜೆ ಹಾಕೋದನ್ನ ನಾವು ನೀವೆಲ್ಲ ನೋಡಿಯೇ ಇರ್ತೀವಿ. ಆದರೆ ಹಸು ಕ್ಯಾಟ್ ವಾಕ್ ಮಾಡಿದ್ದನದನ ಎಲ್ಲಾದ್ರೂ ಆದರೆ ಇತ್ತೀಚೆಗೆ ಹಸುವೊಂದು ರಸ್ತೆ ಮಧ್ಯೆ ಮಾಡೆಲ್‍ಗಳಂತೆ ಸ್ಟೈಲ್ ಆಗಿ ಕ್ಯಾಟ್‍ವಾಕ್ ಮಾಡಿದೆ. ಅದರ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಯಕ್ಕಾ ಮಕ್ಕಾ ವೈರಲ್ ಆಗುತ್ತಿದೆ.
ವೀಡಿಯೋದಲ್ಲಿ ಕಂದು ಮತ್ತು ಬಿಳಿ ಮೈ ಬಣ್ಣ ಹೊಂದಿರುವ ಹಸುವೊಂದು ರಸ್ತೆ ಮಧ್ಯೆ ತಲೆ ಅಲ್ಲಾಡಿಸುತ್ತಾ, ಹೆಜ್ಜೆ ಮೇಲೆ ಹೆಜ್ಜೆ ಹಾಕುತ್ತಾ ಕ್ಯಾಟ್ ವಾಕ್ ಮಾಡಿದೆ. ಕ್ಯಾಟ್ ವಾಕ್ ಹಸುವಿನ ಹಿಂದೆ ಹಲವಾರು ಹಸುಗಳು ನಡೆದುಕೊಂಡು ಬರುತ್ತಿರುತ್ತದೆ. ಹಸು ಮುಂದೆ ಕ್ಯಾಟ್ ವಾಕ್ ಮಾಡಿ ನಡೆಯುತ್ತಿದ್ದರೆ, ಉಳಿದ ಹಸುಗಳು ಹಿಂದೆ ಬರುತ್ತಿರುವುದು, ಸೆಲೆಬ್ರೆಟಿಗಳ ಹಿಂದೆ ಬಾಡಿಗಾರ್ಡ್‍ಗಳು ಬರುವಂತೆ ಕಾಣಿಸುತ್ತದೆ. ಇದು ಒಂತರಾ ಮಜಾ ಕೊಡುತ್ತಿರೋದ್ರಿಂದ ನೆಟ್ಟಿಗರು ಈ ವಿಡಿಯೋವನ್ನ ಹೆಚ್ಚಚ್ಚು ಶೇರ್ ಮಾಡ್ತಿದ್ದಾರೆ.
PublicNext
26/02/2021 03:59 pm